1.60 ಲಕ್ಷಕ್ಕೂ ಅಧಿಕ ಟ್ವಿಟರ್ ಖಾತೆಗಳ ಸ್ಥಗಿತ

Update: 2019-05-10 18:11 GMT

ಸಾನ್‌ಫ್ರಾನ್ಸಿಸ್ಕೊ, ಮೇ 10: ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವುದಕ್ಕಾಗಿ ಟ್ವಿಟರ್ 2018ರ ಜುಲೈ-ಡಿಸೆಂಬರ್ ಅವಧಿಯಲ್ಲಿ 1,66,513 ಖಾತೆಗಳನ್ನು ಅಮಾನತಿನಲ್ಲಿಟ್ಟಿದೆ ಎಂದು ಟ್ವಿಟರ್ ಹೇಳಿದೆ. ಟ್ವಿಟರ್‌ನ ‘ಶೂನ್ಯ-ಸಹನೆ ನೀತಿ’ಯ ಜಾರಿಯ ಹಿನ್ನೆಲೆಯಲ್ಲಿ ಈ ವೇದಿಕೆಯನ್ನು ಭಯೋತ್ಪಾದಕ ಗುಂಪುಗಳು ಬಳಸಲು ಯತ್ನಿಸುವ ಪ್ರಕರಣಗಳು ಕಡಿಮೆಯಾಗಿವೆ ಎಂದು ಅದು ಹೇಳಿದೆ.

2018 ಜನವರಿ-ಜೂನ್ ಅವಧಿಗೆ ಹೋಲಿಸಿದರೆ, ಭಯೋತ್ಪಾದನೆ ಸಂಬಂಧಿ ಟ್ವೀಟ್‌ಗಳಲ್ಲಿ 19 ಶೇಕಡದಷ್ಟು ಕಡಿತವಾಗಿದೆ ಎಂದು ಟ್ವಿಟರ್‌ನ ಕಾನೂನು, ನೀತಿ ಮತ್ತು ವಿಶ್ವಾಸ ಮತ್ತು ಸುರಕ್ಷೆ ವಿಭಾಗದ ಮುಖ್ಯಸ್ಥ ವಿಜಯಾ ಗದ್ದೆ ತಿಳಿಸಿದ್ದಾರೆ.

‘‘ಸ್ಥಗಿತಗೊಂಡಿರುವ ಖಾತೆಗಳ ಪೈಕಿ 91 ಶೇಕಡದಷ್ಟನ್ನು ಆಂತರಿಕವಾಗಿ ಇದೇ ಉದ್ದೇಶಕ್ಕಾಗಿ ನಿರ್ಮಿಸಲಾದ ತಾಂತ್ರಿಕ ಸಲಕರಣೆಗಳ ಮೂಲಕ ಗುರುತಿಸಲಾಗಿತ್ತು’’ ಎಂದು ಗುರುವಾರ ಹಾಕಿರುವ ಬ್ಲಾಗ್ ಪೋಸ್ಟ್ ಒಂದರಲ್ಲಿ ಅವರು ಹೇಳಿದ್ದಾರೆ.

ಹೆಚ್ಚಿನ ಪ್ರಕರಣಗಳಲ್ಲಿ, ಖಾತೆಗಳನ್ನು ಆರಂಭಿಸುವ ಹಂತದಲ್ಲೇ, ಅವುಗಳಿಂದ ಟ್ವೀಟ್‌ಗಳು ಹೊರಡುವ ಮುನ್ನವೇ ಅವುಗಳನ್ನು ನಿಲ್ಲಿಸಲಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News