ಮೆಕ್ಸಿಕೊದ ಒಲಿಂಪಿಯನ್‌ಗೊಂಝಾಲೆಝ್‌ಗೆ ನಿಷೇಧ

Update: 2019-05-10 18:57 GMT

ಪ್ಯಾರಿಸ್, ಮೇ 10: ವಿಶ್ವ ಹಾಗೂ ಒಲಿಂಪಿಕ್ ಗೇಮ್ಸ್‌ನಲ್ಲಿ 20 ಕಿ.ಮೀ.ನಡಿಗೆಯಲ್ಲಿ ಬೆಳ್ಳಿ ಪದಕ ಜಯಿಸಿರುವ ಮೆಕ್ಸಿಕೊದ ಮರಿಯಾ ಗೊಂಝಾಲೆಝ್‌ಗೆ ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ ಎಂದು ಅಥ್ಲೆಟಿಕ್ಸ್ ಭದ್ರತ ಘಟಕ ಶುಕ್ರವಾರ ತಿಳಿಸಿದೆ. 30ರ ಹರೆಯದ ಗೊಂಝಾಲೆಝ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅನಾಬೊಲಿಕ್ ಸ್ಟಿರಾಯ್ಡಿ ಟ್ರೆನ್‌ಬೊಲೊನ್‌ನ್ನು ಸೇವಿಸಿದ ಆರೋಪ ಎದುರಿಸುತ್ತಿದ್ದರು. ಇದೀಗ ಅವರನ್ನು 2022ರ ತನಕ ಅಮಾನತುಗೊಳಿಸಲಾಗಿದೆ ಎಂದು ಸ್ವತಂತ್ರ ಸಮಿತಿಯೊಂದು ತಿಳಿಸಿದೆ. ನಿಷೇಧ ಎದುರಿಸುತ್ತಿರುವ ಹೊರತಾಗಿಯೂ ಗೊಂಝಾಲೆಝ್ 2016ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಹಾಗೂ 2017ರಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಜಯಿಸಿರುವ ಬೆಳ್ಳಿ ಪದಕವನ್ನು ತನ್ನಲ್ಲೇ ಉಳಿಸಿಕೊಳ್ಳಲಿದ್ದಾರೆ.

ಗೊಂಝಾಲೆಝ್‌ಗೆ ಕ್ರೀಡಾ ವ್ಯಾಜ್ಯ ಇತ್ಯರ್ಥ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News