×
Ad

ಅಂಬಾನಿ, ಅದಾನಿಗೆ ಮ್ಯಾನೇಜರ್ ಆಗಿದ್ದಾರೆ ಪ್ರಧಾನಿ ಮೋದಿ : ಸಿಧು

Update: 2019-05-11 13:53 IST

ಹೊಸದಿಲ್ಲಿ,ಮೇ 11: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರಿಸಿದ ಪಂಜಾಬ್‌ನ ಸಚಿವ ನವಜೋತ್ ಸಿಂಗ್ ಸಿಧು, ಪ್ರಧಾನಿ ಸುಳ್ಳುಗಳ ಮುಖ್ಯಸ್ಥ. ಕೈಗಾರಿಕೋದ್ಯಮಿಗಳಾದ ಅನಿಲ್ ಅಂಬಾನಿ ಹಾಗೂ ಗೌತಮ್ ಅದಾನಿಯವರ ಬ್ಯುಸಿನೆಸ್ ಮ್ಯಾನೇಜರ್ ಆಗಿದ್ದಾರೆ ಎಂದರು.

‘‘ನಾನು ಪ್ರಧಾನಿಯನ್ನು ಸುಳ್ಳುಗಳ ಮುಖ್ಯಸ್ಥ, ವಿಭಜನೆಯ ಮುಖ್ಯಸ್ಥ ಹಾಗೂ ಅಂಬಾನಿ ಹಾಗೂ ಅದಾನಿಯ ಮ್ಯಾನೇಜರ್ ಎಂದು ಕರೆಯಲು ಬಯಸುವೆ’’ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

 ಮೋದಿಯನ್ನು ಓರ್ವ ವಧುವಿಗೆ ಹೋಲಿಸಿದ ಸಿಧು,‘‘ಮೋದಿ ಕಡಿಮೆ ರೊಟ್ಟಿ ಮಾಡುವ ಆ ವಧುವಿದ್ದಂತೆ. ತಾನು ಕೆಲಸ ಮಾಡುತ್ತಿದ್ದೇನೆಂದು ನೆರೆ ಮನೆಯವರಿಗೆ ಗೊತ್ತಾಗುವ ಹಾಗೆ ವಧು ಕೈ ತುಂಬಾ ಬಳೆ ತೊಡುತ್ತಾಳೆ. ಮೋದಿ ಸರಕಾರ ಕೂಡ ಇದೇ ರೀತಿ ಕೆಲಸ ಮಾಡುತ್ತಿದೆ ಎಂದರು.

ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್ ಪಡೆದ ಮರುದಿನವೇ ಸಿಧು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News