×
Ad

"ಮೊಹಮ್ಮದ್ ಅಲಿ ಜಿನ್ನಾ ವಿದ್ವಾಂಸ, ಅವರೇ ನಮ್ಮ ಪ್ರಧಾನಿಯಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ"

Update: 2019-05-11 23:33 IST

ಹೊಸದಿಲ್ಲಿ,ಮೇ 11: ಮೊಹಮ್ಮದ್ ಅಲಿ ಜಿನ್ನಾ ಅವರು ಸುಶಿಕ್ಷಿತ ವ್ಯಕ್ತಿಯಾಗಿದ್ದರು, ಅವರನ್ನು ಭಾರತದ ಪ್ರಧಾನಿಯನ್ನಾಗಿ ನೇಮಿಸುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದರೆ ದೇಶವು ವಿಭಜನೆಯಾಗುತ್ತಿರಲಿಲ್ಲ ಎಂದು ಮಧ್ಯಪ್ರದೇಶದ ರತ್ಲಾಮ್-ಝಬುವಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುಮಾನಸಿಂಗ್ ಡಾಮೋರ್ ಅವರು ಶನಿವಾರ ಹೇಳಿದರು. ತನ್ನ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಕಾಂಗ್ರೆಸ್ ಮತ್ತು ಜವಾಹರಲಾಲ್ ನೆಹರೂ ಭಾರತದ ವಿಭಜನೆಗೆ ಪೂರಕ ಸ್ಥಿತಿಯನ್ನು ಸೃಷ್ಟಿಸಿದ್ದರು ಎಂದೂ ಆರೋಪಿಸಿದರು.

ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನೆಹರು ಅವರು ಹಟ ಮಾಡದಿದ್ದರೆ ಈ ದೇಶವು ಎರಡು ಹೋಳುಗಳಾಗುತ್ತಿರಲಿಲ್ಲ. ಜಿನ್ನಾ ಓರ್ವ ನ್ಯಾಯವಾದಿ, ವಿದ್ವಾನ್ ವ್ಯಕ್ತಿಯಾಗಿದ್ದರು. ನಮ್ಮ ಪ್ರಧಾನಿ ಜಿನ್ನಾ ಆಗಬೇಕು ಎಂದು ಆಗ ನಿರ್ಧರಿಸಿದ್ದರೆ ದೇಶದ ವಿಭಜನೆಯಾಗುತ್ತಿರಲಿಲ್ಲ ಎಂದು ಡಾಮೋರ್ ಹೇಳಿದರು.

ರವಿವಾರ ಈ ಕುರಿತು ಹೇಳಿಕೆ ನೀಡಿದ ಅವರು, ತನ್ನ ಭಾಷಣವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News