×
Ad

ಪದ್ಮಶ್ರೀ ಪುರಸ್ಕೃತ: ಭೋಜ್‌ಪುರಿ ಗಾಯಕ ಹೀರಾಲಾಲ್ ಯಾದವ್ ನಿಧನ

Update: 2019-05-12 18:41 IST

ವಾರಾಣಸಿ, ಮೇ 12: ಪದ್ಮಶ್ರೀ ಪುರಸ್ಕೃತ ಭೋಜ್‌ಪುರಿ ಗಾಯಕ ಹೀರಾಲಾಲ್ ಯಾದವ್ ವಾರಾಣಸಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಅವರಿಗೆ 93 ವರ್ಷ ವಯಸ್ಸಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕೆಲವು ತಿಂಗಳಿನಿಂದ ಅಸ್ವಸ್ಥರಾಗಿದ್ದ ಯಾದವ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನದ ಹಿಂದೆಯಷ್ಟೇ ಪ್ರಧಾನಿ ಮೋದಿಯವರು ಯಾದವ್‌ಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.

ಭೋಜ್‌ಪುರಿ ಜಾನಪದದ ಬಿರ್ಹ ಪ್ರಕಾರದ ಸುಪ್ರಸಿದ್ಧ ಗಾಯಕರಾಗಿದ್ದ ಯಾದವ್‌ಗೆ ಈ ವರ್ಷದ ಜನವರಿಯಲ್ಲಿ ದೇಶದ ನಾಲ್ಕನೇ ಅತ್ಯುನ್ನತ ಗೌರವವಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸಂಗೀತ ಕ್ಷೇತ್ರಕ್ಕೆ ನೀಡಿದ ಅಮೋಘ ಸೇವೆಗಾಗಿ ಅವರಿಗೆ 2015ರಲ್ಲಿ ಯಶ್‌ಭಾರತಿ ಪುರಸ್ಕಾರ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News