ಬೆರ್ಟೆನ್ಸ್ ಗೆ ಮ್ಯಾಡ್ರಿಡ್ ಓಪನ್ ಕಿರೀಟ

Update: 2019-05-12 19:08 GMT

ಮ್ಯಾಡ್ರಿಡ್, ಮೇ 12: ಫ್ರೆಂಚ್ ಓಪನ್ ಚಾಂಪಿಯನ್ ಸಿಮೊನಾ ಹಾಲೆಪ್‌ರನ್ನು ನೇರ ಸೆಟ್‌ಗಳಿಂದ ಸೋಲಿಸಿದ ಕಿಕಿ ಬೆರ್ಟೆನ್ಸ್ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಆಟಗಾರ್ತಿ ಬೆರ್ಟೆನ್ಸ್ ರೊಮಾನಿಯದ ಹಾಲೆಪ್‌ರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ. ಈ ಮೂಲಕ ವೃತ್ತಿಜೀವನದಲ್ಲಿ ಮಹತ್ವದ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಒಂದೂ ಸೆಟನ್ನು ಕಳೆದುಕೊಳ್ಳದೇ ಚಾಂಪಿಯನ್‌ಶಿಪ್‌ನ್ನು ಜಯಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ಫೈನಲ್‌ನಲ್ಲಿ ಪೆಟ್ರಾ ಕ್ವಿಟೋವಾಗೆ ಸೋತಿದ್ದ ಬೆರ್ಟೆನ್ಸ್ ಈ ಬಾರಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದು ಸೋಮವಾರ ಬಿಡುಗಡೆಯಾಗಲಿರುವ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 4ನೇ ರ್ಯಾಂಕಿಗೆ ತಲುಪಲು ಸಜ್ಜಾಗಿದ್ದಾರೆ. ಈ ಸೋಲು ಹಾಲೆಪ್‌ಗೆ ತೀವ್ರ ನೋವುಂಟು ಮಾಡಿದೆ. ಪ್ರಶಸ್ತಿ ಜಯಿಸಿದ್ದರೆ ಮತ್ತೊಮ್ಮೆ ವಿಶ್ವದ ನಂ.1 ಆಟಗಾರ್ತಿಯಾಗುವ ಅವಕಾಶವಿತ್ತು. 2016 ಹಾಗೂ 2017ರಲ್ಲಿ ಮ್ಯಾಡ್ರಿಡ್ ಓಪನ್ ಜಯಿಸಿದ್ದ ಹಾಲೆಪ್ ಮೂರನೇ ಬಾರಿ ಫೈನಲ್‌ಗೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News