ಐದನೇ ಏಕದಿನ: ವಿಂಡೀಸ್ ವಿರುದ್ಧ ಬಾಂಗ್ಲಾ ದಿಗ್ವಿಜಯ

Update: 2019-05-15 02:22 GMT

ಡಬ್ಲಿನ್, ಮೇ 14: ಮುಶ್ಫಿಕುರ್ರಹೀಂ ಹಾಗೂ ಸೌಮ್ಯ ಸರ್ಕಾರ್ ಅವರ ಅರ್ಧಶತಕಗಳ ಕೊಡುಗೆ ಹಾಗೂ ವೇಗದ ಬೌಲರ್ ಮುಸ್ತಫಿಝರ್ರಹ್ಮಾನ್ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಬಾಂಗ್ಲಾದೇಶ ತಂಡ ವೆಸ್ಟ್‌ಇಂಡೀಸ್ ವಿರುದ್ಧದ 5ನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ವೆಸ್ಟ್‌ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರ ಶೈ ಹೋಪ್(87, 108 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಜೇಸನ್ ಹೋಲ್ಡರ್(62, 76 ಎಸೆತ, 3 ಬೌಂಡರಿ, 1 ಸಿಕ್ಸರ್)ಅರ್ಧಶತಕ ಗಳಿಸಿದರು. ಆದಾಗ್ಯೂ ಮಶ್ರಾಫೆ ಮೊರ್ತಝಾ(3-60) ಹಾಗೂ ಮುಸ್ತಫಿಝುರ್ರಹ್ಮಾನ್(4-43) ವಿಂಡೀಸ್‌ನ್ನು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಗೆಲ್ಲಲು ಸವಾಲಿನ ಮೊತ್ತ ಪಡೆದ ಬಾಂಗ್ಲಾದೇಶಕ್ಕೆ ಆರಂಭಿಕ ಆಟಗಾರ ಸೌಮ್ಯ ಸರ್ಕಾರ್(54, 67 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ರಹೀಂ(63, 73 ಎಸೆತ, 5 ಬೌಂಡರಿ, 1 ಸಿಕ್ಸರ್),ಮುಹಮ್ಮದ್ ಮಿಥುನ್(43, 53 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಮಹ್ಮೂದುಲ್ಲಾ (ಔಟಾಗದೆ 30, 34 ಎಸೆತ, 1 ಬೌಂಡರಿ, 1 ಸಿಕ್ಸರ್)ಆಸರೆಯಾದರು. 47.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಲು ನೆರವಾದರು. ವಿಂಡೀಸ್ ಪರ ನರ್ಸ್(3-53)ಯಶಸ್ವಿ ಬೌಲರ್ ಎನಿಸಿಕೊಂಡರು. ವಿಂಡೀಸ್‌ನ 4 ವಿಕೆಟ್ ಕಬಳಿಸಿದ ಮುಸ್ತಫಿಝರ್ರಹ್ಮಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News