ಭಾರತ ‘ಎ’ ತಂಡದ ಕೋಚ್‌ಗಳಾಗಿ ಹಿರ್ವಾನಿ, ಕೋಟಕ್, ಯಾದವ್ ನೇಮಕ

Update: 2019-05-16 05:20 GMT

ಮುಂಬೈ, ಮೇ 15: ಭಾರತದ ಮಾಜಿ ಲೆಗ್-ಸ್ಪಿನ್ನರ್ ನರೇಂದ್ರ ಹಿರ್ವಾನಿ, ಮಾಜಿ ವಿಕೆಟ್‌ಕೀಪರ್ ವಿಜಯ್ ಯಾದವ್ ಹಾಗೂ ದೇಶೀಯ ಕ್ರಿಕೆಟ್ ದಿಗ್ಗಜ ಸೀತಾಂಶು ಕೋಟಕ್‌ರನ್ನು ಕ್ರಮವಾಗಿ ಭಾರತ ‘ಎ’ ತಂಡದ ಬೌಲಿಂಗ್, ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಬಿಸಿಸಿಐ ಬುಧವಾರ ನೇಮಕ ಮಾಡಿದೆ.

ಭಾರತ ‘ಎ’ ತಂಡ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡ ಬಳಿಕ ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ಸರಣಿಯನ್ನು ಆಡಲಿದೆ.

 ಈ ಬಾರಿ ಬ್ಯಾಟಿಂಗ್ ಲೆಜೆಂಡ್ ರಾಹುಲ್ ದ್ರಾವಿಡ್‌ರನ್ನು ಭಾರತ ‘ಎ’ ತಂಡದ ಕೋಚ್ ಆಗಿ ಏಕೆ ನೇಮಕ ಮಾಡಿಲ್ಲ ಎನ್ನುವುದಕ್ಕೆ ವಿವರಣೆ ನೀಡಿದ ಬಿಸಿಸಿಐ, ‘‘19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯು ಮುಂದಿನ ವರ್ಷ ದಕ್ಷಿಣ ಆಫ್ರಿಕದಲ್ಲಿ ನಡೆಯಲಿದೆ. ದ್ರಾವಿಡ್‌ಗೆ ಕಿರಿಯ ಆಟಗಾರರತ್ತಲೂ ಗಮನ ನೀಡಬೇಕಾಗಿದೆ. ದ್ರಾವಿಡ್ ಮೇ 17 ರಿಂದ ಸೂರತ್‌ನಲ್ಲಿ ಆರಂಭವಾಗುವ ವಲಯ ಕ್ರಿಕೆಟ್ ಅಕಾಡಮಿ ಟೂರ್ನಮೆಂಟ್ ಹಾಗೂ ಭಾರತ ಎ ತಂಡದ ಟೂರ್ನಿಗಳಲ್ಲೂ ಇರಲಿದ್ದಾರೆ ಎಂದು ಹೇಳಿದೆ.

ಬಿಸಿಸಿಐ ದ್ರಾವಿಡ್‌ಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ) ನಿರ್ದೇಶಕ ಸ್ಥಾನದಂತಹ ಮಹತ್ವದ ಹುದ್ದೆಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News