ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್ ಪತನ: ಇಬ್ಬರಿಗೆ ಗಾಯ

Update: 2019-05-16 17:30 GMT

ನ್ಯೂಯಾರ್ಕ್, ಮೇ 16: ಅಮೆರಿಕದ ಮ್ಯಾನ್‌ಹಟನ್‌ನಲ್ಲಿ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಬುಧವಾರ ಹೆಲಿಕಾಪ್ಟರೊಂದು ಹಡ್ಸನ್ ನದಿಯಲ್ಲಿ ಪತನಗೊಂಡಿದೆ. ಘಟನೆಯಲ್ಲಿ ಪೈಲಟ್ ಮತ್ತು ಓರ್ವ ಡಾಕ್‌ವರ್ಕರ್ ಗಾಯಗೊಂಡಿದ್ದಾರೆ. ಹೆಲಿಕಾಪ್ಟರ್ ಉರುಳುತ್ತಿರುವ ದೃಶ್ಯಗಳನ್ನು ಪ್ರತ್ಯಕ್ಷದರ್ಶಿಗಳು ಚಿತ್ರಿಸಿದ್ದಾರೆ. ಹಡ್ಸನ್ ನದಿಯ ಮೇಲಿನ ಆಕಾಶದಲಿ ಹೆಲಿಕಾಪ್ಟರ್ ಪರಿಭ್ರಮಿಸುತ್ತಾ ನೀರಿಗೆ ಬೀಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.ವಿಮಾನದಲ್ಲಿ ಪೈಲಟ್ ಮಾತ್ರ ಇದ್ದರು. ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆ ದಾರಿಯಲ್ಲಿ ಹೋಗುತ್ತಿದ್ದ ಡಾಕ್‌ವರ್ಕರ್ ಬೀಳುತ್ತಿರುವ ಹೆಲಿಕಾಪ್ಟರ್‌ನಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News