ವಿಶ್ವಕಪ್ ವಿಜೇತ ತಂಡಕ್ಕೆ 28 ಕೋಟಿ ರೂ. ಬಹುಮಾನ

Update: 2019-05-18 02:49 GMT

ಲಂಡನ್, ಮೇ 17: ಮುಂಬರುವ ಐಸಿಸಿ ವಿಶ್ವಕಪ್‌ನಲ್ಲಿ ವಿಜೇತ ತಂಡ 4 ಮಿಲಿಯನ್ ಯುಎಸ್ ಡಾಲರ್(28 ಕೋ.ರೂ.) ಬಹುಮಾನವನ್ನು ಮನೆಗೊಯ್ಯಲಿದೆ. ಇದು ವಿಶ್ವಕಪ್ ಟೂರ್ನಮೆಂಟ್‌ನ ಇತಿಹಾಸದಲ್ಲಿ ಗರಿಷ್ಠ ಬಹುಮಾನ ಮೊತ್ತವಾಗಿದೆ.

10 ತಂಡಗಳು ಭಾಗವಹಿಸುವ ಟೂರ್ನಮೆಂಟ್‌ನಲ್ಲಿ ಜು.16 ರಂದು ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಚಾಂಪಿಯನ್‌ಪಟ್ಟಕ್ಕೇರುವ ತಂಡ ಭಾರೀ ಬಹುಮಾನದ ಜೊತೆಗೆ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ. ಒಟ್ಟು ಬಹುಮಾನ ಮೊತ್ತ 70 ಕೋ.ರೂ. ಆಗಿದ್ದು, ರನ್ನರ್ಸ್‌ಅಪ್ ತಂಡ 2 ಮಿಲಿಯನ್ ಯುಎಸ್ ಡಾಲರ್‌ನ್ನು (14 ಕೋ.ರೂ.)ಜೇಬಿಗಿಳಿಸಲಿದೆ. ಸೆಮಿ ಫೈನಲ್‌ನಲ್ಲಿ ಸೋಲುವ ತಂಡಗಳು ತಲಾ 800,000 ಯುಎಸ್ ಡಾಲರ್ (5 ಕೋ.ರೂ.)ಬಹುಮಾನ ತನ್ನದಾಗಿಸಿಕೊಳ್ಳಲಿವೆ.

 ಪ್ರತಿ ಲೀಗ್ ಪಂದ್ಯಗಳ ವಿಜೇತ ತಂಡಗಳು ತಲಾ 28 ಲಕ್ಷ ರೂ. ಬಹುಮಾನ ಪಡೆಯಲಿವೆ. ರೌಂಡ್‌ರಾಬಿನ್ ಮಾದರಿಯಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ವಿಶ್ವಶ್ರೇಷ್ಠ ತಂಡಗಳು ತಲಾ ಒಂದು ಬಾರಿ ಮುಖಾಮುಖಿಯಾಗಲಿವೆ.

ಐಸಿಸಿ ವಿಶ್ವಕಪ್‌ನ ಬಹುಮಾನ ವಿವರ

►ವಿನ್ನರ್: 4 ಮಿಲಿಯನ್ ಯುಎಸ್‌ಡಿ

►ರನ್ನರ್ಸ್ ಅಪ್: 2 ಮಿಲಿಯನ್ ಯುಎಸ್‌ಡಿ

►ಸೆಮಿಫೈನಲ್‌ನಲ್ಲಿ ಸೋಲುವ 2 ತಂಡಕ್ಕೆ ತಲಾ 800,000 ಯುಎಸ್‌ಡಿ (5 ಕೋ. ರೂ)

►ಪ್ರತಿ ಲೀಗ್ ಹಂತದ ಪಂದ್ಯ ವಿಜೇತರು(45):ತಲಾ 40,000 ಯುಎಸ್‌ಡಿ (28 ಲಕ್ಷ ರೂ.)

►ಲೀಗ್ ಹಂತ ದಾಟುವ ತಂಡಕ್ಕೆ ತಲಾ 100,000 ಯುಎಸ್‌ಡಿ. (70 ಲಕ್ಷ ರೂ.)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News