ಮೇ 22ರಿಂದ ರೈಲ್ವೇ ಕಿರಿಯ ಇಂಜಿನಿಯರ್ ಪರೀಕ್ಷೆ

Update: 2019-05-18 15:02 GMT

ಹೊಸದಿಲ್ಲಿ,ಮೇ.18: ರೈಲ್ವೇ ಕಿರಿಯ ಇಂಜಿನಿಯರ್ ಪರೀಕ್ಷೆ ಮೇ 22ರಂದು ನಡೆಯಲಿದ್ದು, ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಈಗಾಗಲೇ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಕಿರಿಯ ಇಂಜಿನಿಯರ್ (ಜೆಇ), ಕಿರಿಯ ಇಂಜಿನಿಯರ್ (ಮಾಹಿತಿ ತಂತ್ರಜ್ಞಾನ), ಡಿಪೊ ಸಾಮಾಗ್ರಿ ವರಿಷ್ಠಾಧಿಕಾರಿ (ಡಿಎಂಎಸ್) ಮತ್ತು ಕೆಮಿಕಲ್ ಮತ್ತು ಲೋಹ ವಿಜ್ಞಾನ ಸಹಾಯಕ (ಸಿಎಂಎ) ಹುದ್ದೆಗಳಿಗೆ ಆಯ್ಕೆಗಾಗಿ ಕಂಪ್ಯೂಟರ್ ಆಧಾರಿತ ಎರಡು ಪರೀಕ್ಷೆಗಳು ನಡೆಯಲಿವೆ.

ಎರಡನೇ ಹಂತದ ಪರೀಕ್ಷೆಗೆ ಖಾಲಿ ಇರುವ ಹುದ್ದೆಗಿಂತ 15 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆರ್‌ಆರ್‌ಬಿ ಜೆಇ ಪರೀಕ್ಷೆಯಲ್ಲಿ, ಗಣಿತ, ಸಾಮಾನ್ಯ ಜ್ಞಾನ ಮತ್ತು ತರ್ಕ, ಸಾಮಾನ್ಯ ಜಾಗೃತಿ, ಸಾಮಾನ್ಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ನೂರು ಪ್ರಶ್ನೆಗಳನ್ನು ಕೇಳಲಾಗುವುದು. ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ 90 ನಿಮಿಷ ಸಮಯಾವಕಾಶ ನೀಡಲಾಗುವುದು.

ಪ್ರತಿ ತಪ್ಪು ಉತ್ತರಕ್ಕೆ, ನಿಗದಿತ ಪ್ರಶ್ನೆಗೆ ನೀಡಲಾಗಿರುವ ಒಟ್ಟು ಅಂಕದ ಮೂರನೇ ಒಂದರಷ್ಟನ್ನು ಕಡಿತಗೊಳಿಸಲಾಗುವುದು. ಪರೀಕ್ಷೆಯಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಅಗತ್ಯವಿರುವ ಕನಿಷ್ಟ ಅಂಕ ಶೇ.40. ಸಾಮಾನ್ಯ ಮತ್ತು ಒಬಿಸಿ ವರ್ಗಕ್ಕೆ ತೇರ್ಗಡೆ ಹೊಂದಲು ಕನಿಷ್ಟ ಅಂಕ ಶೇ.30 ಆಗಿದ್ದರೆ ಎಸ್ಸಿ ಮತ್ತು ಎಸ್ಟಿ ವಿಭಾಗಕ್ಕೆ ಶೇ.25 ಆಗಿದೆ. ಮೊಬೈಲ್ ಫೋನ್, ಬ್ಲೂಟೂತ್, ಪೆನ್‌ಡ್ರೈವ್, ಲ್ಯಾಪ್‌ಟಾಪ್, ಕ್ಯಾಲ್ಕುಲೇಟರ್, ವಾಚ್ ಅಥವಾ ಇತರ ಯಾವುದೇ ದೂರಸಂಪರ್ಕ ಸಾಧನ, ಪೆನ್, ಪೆನ್ಸಿಲ್, ಪರ್ಸ್, ಬೆಲ್ಟ್ ಮತ್ತು ಲೋಹದ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ವಿವರಗಳು ಮತ್ತು ಪ್ರವೇಶ ಕಾರ್ಡ್‌ಗಳು ಆರ್‌ಆರ್‌ಬಿ ಜಾಲತಾಣದಲ್ಲಿ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News