ವೆಸ್ಟ್‌ಇಂಡೀಸ್ ವಿಶ್ವಕಪ್ ತಂಡದ ಮೀಸಲು ಆಟಗಾರನಾಗಿ ಮಾಜಿ ಕ್ರಿಕೆಟಿಗ ಡ್ವೇಯ್ನಿ ಬ್ರಾವೊ!

Update: 2019-05-19 18:43 GMT

ಸೈಂಟ್ ಜಾನ್ಸ್, ಮೇ 19: 2018ರ ಅಕ್ಟೋಬರ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ವೆಸ್ಟ್‌ಇಂಡೀಸ್‌ನ ಮಾಜಿ ನಾಯಕ ಡ್ವೇಯ್ನ್ ಬ್ರಾವೊ ಈ ವರ್ಷದ ಐಸಿಸಿ ವಿಶ್ವಕಪ್‌ಗೆ ವಿಂಡೀಸ್‌ನ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ.

ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಪಟ್ಟಿಯಲ್ಲಿ 2016ರ ಅಕ್ಟೋಬರ್‌ನಿಂದ ಯಾವುದೇ ಏಕದಿನ ಪಂದ್ಯವನ್ನಾಡದ ಕಿರೊನ್ ಪೊಲಾರ್ಡ್‌ರಿದ್ದಾರೆ.

ಬ್ರಾವೊ 2014ರ ಅಕ್ಟೋಬರ್‌ನಿಂದ ಏಕದಿನ ಪಂದ್ಯವನ್ನು ಆಡಿಲ್ಲ. ಕ್ರಿಕೆಟ್ ಮಂಡಳಿಯೊಂದಿಗಿನ ಸಂಘರ್ಷದಿಂದಾಗಿ ಬ್ರಾವೊ ನಾಯಕತ್ವದಲ್ಲಿ 2014ರಲ್ಲಿ ವಿಂಡೀಸ್ ತಂಡ ಭಾರತ ಸರಣಿಯನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗಿತ್ತು. 2016ರ ಸೆಪ್ಟಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ಟಿ-20 ಪಂದ್ಯವನ್ನು ಆಡುವುದರೊಂದಿಗೆ ಬ್ರಾವೊ ವಿಂಡೀಸ್ ಪರ ಕೊನೆಯ ಪಂದ್ಯ ಆಡಿದ್ದರು. ಮೇ 30 ರಿಂದ ಇಂಗ್ಲೆಂಡ್ ಹಾಗೂ ವೇಲ್ಸ್ ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಆರಂಭವಾಗಲಿದೆ. ವೆಸ್ಟ್‌ಇಂಡೀಸ್ ತಂಡ ನಾಟಿಂಗ್‌ಹ್ಯಾಮ್‌ನಲ್ಲಿ ಮೇ 31 ರಂದು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News