ಪ್ರಸಿದ್ಧ ಪಾಕ್ ಕ್ರಿಕೆಟಿಗನ 2 ವರ್ಷದ ಪುತ್ರಿ ಕ್ಯಾನ್ಸರ್ ನಿಂದ ಮೃತ್ಯು

Update: 2019-05-20 09:55 GMT

ಇಸ್ಲಾಮಾಬಾದ್, ಮೇ 20: ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಆಸಿಫ್ ಅಲಿಯವರ ಎರಡು ವರ್ಷದ ಪುತ್ರಿ ನೂರ್ ಫಾತಿಮಾ, ನಾಲ್ಕನೇ ಹಂತದ ಕ್ಯಾನ್ಸರ್ ಚಿಕಿತ್ಸೆ ಬಳಿಕ ಅಮೆರಿಕದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಪುತ್ರಿಯ ನಿಧನದ ಹಿನ್ನೆಲೆಯಲ್ಲಿ ಆಸಿಫ್ ಅಲಿ ಇಂಗ್ಲೆಂಡ್ ಪ್ರವಾಸ ತೊರೆಯಲಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಸಿಫ್ ಆಡುತ್ತಿರುವ ಇಸ್ಲಾಮಾಬಾದ್ ಯುನೈಟೆಡ್ ತಂಡ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ಪುತ್ರಿಯನ್ನು ಕಳೆದುಕೊಂಡ ಆಸಿಫ್ ಅಲಿಯವರಿಗೆ ಐಎಸ್‍ಎಲ್‍ಯು ಹೃದಯಾಂತರಾಳದ ಸಾಂತ್ವನ ಹೇಳುತ್ತಿದೆ. ಆಸಿಫ್ ಹಾಗೂ ಅವರ ಕುಟುಂಬಕ್ಕಾಗಿ ನಮ್ಮ ವಿಶೇಷ ಪ್ರಾರ್ಥನೆಗಳು. ಆಸಿಫ್ ಸಾಮರ್ಥ್ಯದ ಉದಾಹರಣೆ. ಅವರು ನಮಗೆ ಸ್ಫೂರ್ತಿ" ಎಂದು ಹೇಳಿದೆ.

ಇದಕ್ಕೂ ಮುನ್ನ ರವಿವಾರ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದ ಐದನೇ ಹಾಗೂ ಕೊನೆಯ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ 54 ರನ್‍ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 27 ವರ್ಷದ ಆಸಿಫ್ ಅಲಿ 22 ರನ್ ಗಳಿಸಿದ್ದರು. ಮೊದಲ ಪಂದ್ಯ ಮಳೆಗೆ ಆಹುತಿಯಾದ ಬಳಿಕ ಸರಣಿಯ ಎಲ್ಲ ನಾಲ್ಕು ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ. ಸರಣಿಯ ಎಲ್ಲ ಪಂದ್ಯಗಳಲ್ಲಿ ಆಡಿದ ಅವರು, ಎರಡು ಅರ್ಧಶತಕಗಳನ್ನು ಗಳಿಸಿದ್ದರು. 16 ಏಕದಿನ ಪಂದ್ಯಗಳಲ್ಲಿ ಅವರು 31.09 ರನ್ ಸರಾಸರಿಯಲ್ಲಿ 342 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News