ಪೊಲ್ಲಾಚಿ ಲೈಂಗಿಕ ಕಿರುಕುಳ ಪ್ರಕರಣ: ಸಿಬಿಐಯಿಂದ ಶೋಧ ಕಾರ್ಯಾಚರಣೆ

Update: 2019-05-20 16:51 GMT

ಕೋಯಂಬತ್ತೂರ್, ಮೇ 20: ಪೊಲ್ಲಾಚಿ ಸಮೀಪ ತಂಡವೊಂದು ಮಹಿಳೆಯಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸೋಮವಾರ ಆರೋಪಿಗಳ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ತಮಿಳುನಾಡಿನ ಸಿಬಿ-ಸಿಐಡಿಯಿಂದ ತನಿಖೆಯನ್ನು ಇತ್ತೀಚೆಗೆ ಸ್ವೀಕರಿಸಿದ್ದ ಸಿಬಿಐಯ ಇಬ್ಬರು ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿ ಐವರು ಬಂಧಿತರಲ್ಲಿ ಓರ್ವನಾದ ಸಬರಿರಾಜನ್‌ನ ನಿವಾಸದಲ್ಲಿ ಶೋಧ ನಡೆಸಿದರು. ಈ ಸಂದರ್ಭ ಮನೆಯಲ್ಲಿದ್ದ ಆತನ ಪೋಷಕರನ್ನು ಕೂಡ ವಿಚಾರಣೆ ನಡೆಸಿದರು.

ನಾಲ್ವರು ದುಷ್ಕರ್ಮಿಗಳ ತಂಡ ಕಾರಿನೊಳಗೆ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿತ್ತು. ಈ ಘಟನೆಯನ್ನು ವೀಡಿಯೊ ಮಾಡಿ ಬ್ಲಾಕ್‌ಮೇಲ್ ಮಾಡಿತ್ತು ಎಂದು 19 ವರ್ಷದ ಯುವತಿಯೋರ್ವಳು ಫೆಬ್ರವರಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಪೊಲ್ಲಾಚಿಯಲ್ಲಿ ಈ ತಂಡ ದೊಡ್ಡ ಸಂಖ್ಯೆಯ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದೆ ಹಾಗೂ ಅವರನ್ನು ಬ್ಲಾಕ್‌ಮೇಲ್ ಮಾಡಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News