ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದಲ್ಲಿ ಹಾದು ಹೋದ ಅಮೆರಿಕ ಯುದ್ಧ ನೌಕೆ

Update: 2019-05-20 18:03 GMT

ವಾಶಿಂಗ್ಟನ್, ಮೇ 20: ದಕ್ಷಿಣ ಚೀನಾ ಸಮುದ್ರದಲ್ಲಿರುವ, ಚೀನಾ ತನ್ನದೆಂದು ಹೇಳಿಕೊಳ್ಳುವ ವಿವಾದಾಸ್ಪದ ಸ್ಕಾರ್‌ಬೋರೋ ಶೋಲ್ ಸಮೀಪ ತನ್ನ ಯುದ್ಧ ನೌಕೆಗಳು ರವಿವಾರ ಹಾದು ಹೋಗಿವೆ ಎಂದು ಅಮೆರಿಕ ಸೇನೆ ಹೇಳಿದೆ.

ಈ ನಿಬಿಡ ಜಲಮಾರ್ಗವು ಅಮೆರಿಕ-ಚೀನಾ ಸಂಬಂಧದಲ್ಲಿನ ಉದ್ವಿಗ್ನಕಾರಕ ವಿಷಯಗಳ ಪೈಕಿ ಒಂದಾಗಿದೆ. ವ್ಯಾಪಾರ ಸಮರ, ಅಮೆರಿಕದ ದಿಗ್ಬಂಧನಗಳು ಮತ್ತು ತೈವಾನ್ ವಿಷಯಗಳಲ್ಲಿ ಈ ಎರಡು ದೇಶಗಳು ಸಂಘರ್ಷಕಾರಿ ನಿಲುವುಗಳನ್ನು ಹೊಂದಿವೆ.

ಅಮೆರಿಕದ ಡೆಸ್ಟ್ರಾಯರ್ ನೌಕೆ ‘ಪ್ರೆಬಲ್’ ಈ ಕಾರ್ಯಾಚರಣೆಯಲ್ಲಿ ಭಾಗಿಯಾಯಿತು ಎಂದು ಅಮೆರಿಕ ಸೇನಾ ವಕ್ತಾರರೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದರು.

‘‘ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಅಧಿಕ ಅಧಿಕಾರ ಸ್ಥಾಪನೆಯನ್ನು ಪ್ರಶ್ನಿಸುವುದಕ್ಕಾಗಿ ಹಾಗೂ ಅಂತರ್‌ರಾಷ್ಟ್ರೀಯ ಕಾನೂನಿನ ಆಡಳಿತಕ್ಕೆ ಒಳಪಟ್ಟ ಜಲಮಾರ್ಗಗಳನ್ನು ರಕ್ಷಿಸುವುದಕ್ಕಾಗಿ ಯುದ್ಧ ನೌಕೆ ಪ್ರೆಬಲ್ ಸ್ಕಾರ್‌ಬೋರೋ ರೀಫ್‌ನಿಂದ 12 ನಾಟಿಕಲ್ ಮೈಲಿ ಅಂತರದಲ್ಲಿ ಹಾದು ಹೋಯಿತು’’ ಎಂದು ಏಳನೇ ಫ್ಲೀಟ್‌ನ ವಕ್ತಾರ ಕಮಾಂಡರ್ ಕ್ಲೇ ಡಾಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News