ಬಗ್ದಾದ್‌ನ ‘ಹಸಿರು ವಲಯ’ಕ್ಕೆ ಬಡಿದ ರಾಕೆಟ್

Update: 2019-05-20 18:14 GMT
ಸಾಂರ್ಧಬಿಕ ಚಿತ್ರ

ಬಗ್ದಾದ್, ಮೇ 20: ಇರಾಕ್‌ನ ಸರಕಾರಿ ಕಚೇರಿಗಳು ಮತ್ತು ಅಮೆರಿಕ ಸೇರಿದಂತೆ ವಿವಿಧ ದೇಶಗಳ ರಾಯಭಾರ ಕಚೇರಿಗಳಿರುವ ಬಗ್ದಾದ್‌ನ ಅತಿ ಭದ್ರತಾ ಪ್ರದೇಶ ‘ಗ್ರೀನ್ ರೆನ್’ಗೆ ರವಿವಾರ ‘ಕಟ್ಯೂಶ’ ರಾಕೆಟೊಂದನ್ನು ಹಾರಿಸಲಾಗಿದೆ.

ಇರಾನ್‌ನಿಂದ ಬೆದರಿಕೆಯಿರುವ ಹಿನ್ನೆಲೆಯಲ್ಲಿ, ಅಮೆರಿಕ ಕೆಲವೇ ದಿನಗಳ ಹಿಂದೆ ಬಗ್ದಾದ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಹೆಚ್ಚಿನ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

‘‘ಕಟ್ಯೂಶ ರಾಕೆಟೊಂದು ಗ್ರೀನ್ ರೆನ್‌ಗೆ ಅಪ್ಪಳಿಸಿತು. ಆದರೆ, ಯಾವುದೇ ಸಾವು-ನೋವು ಸಂಭವಿಸಿಲ್ಲ’’ ಎಂದು ಇರಾಕ್ ಭದ್ರತಾ ಅಧಿಕಾರಿಗಳು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ರಾಕೆಟ್ ದಾಳಿಯ ಹಿಂದೆ ಯಾರಿದ್ದಾರೆ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ. ಆದರೆ, ಆರಂಭಿಕ ವರದಿಗಳ ಪ್ರಕಾರ, ದಕ್ಷಿಣ ಬಗ್ದಾದ್‌ನ ತೆರೆದ ಹೊಲವೊಂದರಿಂದ ರಾಕೆಟನ್ನು ಹಾರಿಸಲಾಗಿದೆ ಎಂದು ಪೊಲೀಸ್ ಮೂಲವೊಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಇರಾಕ್ ರಾಜಧಾನಿ ಬಗ್ದಾದ್‌ನ ಮಧ್ಯದಲ್ಲಿರುವ ಅತಿ ಭದ್ರತೆಯ ಗ್ರೀನ್ ರೆನ್‌ನಲ್ಲಿ ಸಂಸತ್ತು, ಪ್ರಧಾನಿ ಕಚೇರಿ, ಅಧ್ಯಕ್ಷರ ಕಚೇರಿ, ಇತರ ಪ್ರಮುಖ ಸರಕಾರಿ ಸಂಸ್ಥೆಗಳು, ಉನ್ನತ ಅಧಿಕಾರಿಗಳ ನಿವಾಸಗಳು ಮತ್ತು ರಾಯಭಾರ ಕಚೇರಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News