ತಪ್ಪಾದ ಮೇಲೆ ತಪ್ಪಾಗಲೆಂದೇ ಮತ್ತೆ ಮತ್ತೆ ಮಾಡುವ ಮತಗಟ್ಟೆ ಸಮೀಕ್ಷೆಗಳು

Update: 2019-05-20 18:36 GMT

ನೀವು ಇಂತಹ ಅದೆಷ್ಟು ಸಮೀಕ್ಷೆಗಳನ್ನು ನೋಡಿದ್ದೀರಿ. ಅವುಗಳನ್ನು ಎದುರಿಸಿದ್ದೀರಿ. ಅವುಗಳು ತಪ್ಪಾದ ಮೇಲೆ ಮತ್ತೆ ಪುನಃ ಅವುಗಳನ್ನು ನೋಡುವ ಧೈರ್ಯ ಮಾಡಿದ್ದೀರಿ. ಇವುಗಳ ಆಧಾರದಲ್ಲಿ ನಾನು ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಒಂದು ಸಿದ್ಧಾಂತ ಮಾಡಿದ್ದೇನೆ. ಈ ಸಿದ್ಧಾಂತಕ್ಕೆ ಪೇಟೆಂಟ್ ಆಗಿಲ್ಲ ಅಥವಾ ನೊಬೆಲ್ ಬಹುಮಾನವೂ ಬಂದಿಲ್ಲ. ಈ ಮತಗಟ್ಟೆ ಸಮೀಕ್ಷೆ ಎಂಬುದು ಒಮ್ಮೆ ತಪ್ಪಾದ ಮೇಲೆ ಮತ್ತೆ ತಪ್ಪುಆಗುವುದಕ್ಕಾಗಿಯೇ ಮಾಡುವ ಜಗತ್ತಿನ ಪ್ರಪ್ರಥಮ ವೈಜ್ಞಾನಿಕ ಕೆಲಸ.

 ಮೋದಿ ಅಲೆ ಕೊನೆಗೂ ಸಿಕ್ಕಿದೆ. ಕಳೆದ ಮೂರು ತಿಂಗಳುಗಳಿಂದ ನ್ಯೂಸ್ ಚಾನೆಲ್‌ಗಳು ಹಾಗೂ ಸಾವಿರಾರು ಪತ್ರಕರ್ತರು ದೇಶದ ಊರೂರು ಸುತ್ತಿ ಮೋದಿ ಅಲೆ ಹುಡುಕುತ್ತಿದ್ದರು, ಆದರೆ ಎಲ್ಲೂ ಸಿಗುತ್ತಿಲ್ಲ ಎಂದು ಹೇಳುತ್ತಿದ್ದರು. ಅಲೆ ಸಿಗದಾಗ ಅಂಡರ್ ಕರೆಂಟ್ (ಸುಪ್ತ ಅಲೆ) ಹುಡುಕಲು ತೊಡಗಿದರು. ಅಂತೂ ಇಂತೂ ಇವತ್ತು ಅವರಿಗೆ ಮತಗಟ್ಟೆ ಸಮೀಕ್ಷೆಗಳ ಕೃಪೆಯಿಂದ ಮೋದಿ ಅಲೆ ಸಿಕ್ಕಿಬಿಟ್ಟಿದೆ. ಈ ಸಮೀಕ್ಷೆಗಳ ಪ್ರಕಾರ ಮೋದಿ ಅಲೆ ಭರ್ಜರಿಯಾಗಿದೆ. ಎಲ್ಲ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತು ಮೈತ್ರಿಕೂಟದ ಸರಕಾರ ಸುಲಭವಾಗಿ ಬರಲಿದೆ. ನೀವು ಈ ಮತಗಟ್ಟೆ ಸಮೀಕ್ಷೆಗಳನ್ನು ನಂಬುತ್ತೀರೋ, ಇಲ್ಲವೋ ಅದು ನಿಮಗೆ ಬಿಟ್ಟಿದ್ದು. ಆದರೆ ನೀವು ನಂಬುವುದು, ಬಿಡುವುದು ಈ ಸಮೀಕ್ಷೆ ಮಾಡುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮೇ 23 ರವರೆಗೆ ನಿಮಗೆ ಟಿವಿಯಲ್ಲಿ ಬೇರೇನೂ ನೋಡಲು ಸಿಗದು. ಅದು ಖಚಿತ. ಆದರೆ ಅದಕ್ಕೂ ಮೊದಲು ಟಿವಿಗಳಲ್ಲಿ ಬೇರೇನಾದರೂ ನೋಡಲು ಸಿಕ್ಕಿದ್ದರೆ ತಾನೇ ಈ ಪ್ರಶ್ನೆ ಬರುವುದು. ನಾನೀಗ ಕೇವಲ ಎರಡು ವಿಷಯಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ. ಒಂದು ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯದ್ದು, ಇನ್ನೊಂದು ಆಸ್ಟ್ರೇಲಿಯದ್ದು. ವಾಟ್ಸ್‌ಆ್ಯಪ್‌ವಿವಿ ಪ್ರಕಾರ ನೀವು ಟಿವಿಯ ವಾಲ್ಯೂಮ್ ಕಡಿಮೆ ಮಾಡಿ, ನಿಮ್ಮ ಮಿತ್ರರು, ಬಂಧುಗಳ ಜೊತೆ ಹೆಚ್ಚು ಇರಿ, ಹಗುರ, ಸಡಿಲ ಬಟ್ಟೆಗಳನ್ನು ಧರಿಸಿರಿ, ಕೂಲರ್ ಅಥವಾ ಎಸಿ ಆನ್ ಮಾಡಿಟ್ಟುಕೊಳ್ಳಿ, ದೀರ್ಘ ಉಸಿರಾಟ ಮಾಡಿ, ಆಗಾಗ ನಗುತ್ತಿರಿ, ಈ ಲೋಕವೇ ಮಾಯೆ ಎಂಬುದನ್ನು ನೆನಪು ಮಾಡಿಕೊಳ್ಳುತ್ತಿರಿ. ಈ ಸಲಹೆ ನನಗೆ ಇಷ್ಟವಾಯಿತು.
  ಇವತ್ತು ಮತಗಟ್ಟೆ ಸಮೀಕ್ಷೆ ಬಂದ ಬಳಿಕ ಮೊದಲ ದಿನ. ಈಗಲೇ ನೀವು ಇಷ್ಟು ಗಾಬರಿಯಾದರೆ ಹೇಗೆ ಸ್ವಾಮಿ ? ಇನ್ನು ನೀವು ಈ ಪರಿಸ್ಥಿತಿಯನ್ನು ಫಲಿತಾಂಶದ ದಿನದವರೆಗೆ ಎದುರಿಸಬೇಕು. ಸ್ವಲ್ಪನೆನಪಿಸಿಕೊಳ್ಳಿ. ನೀವು ಇಂತಹ ಅದೆಷ್ಟು ಸಮೀಕ್ಷೆಗಳನ್ನು ನೋಡಿದ್ದೀರಿ. ಅವುಗಳನ್ನು ಎದುರಿಸಿದ್ದೀರಿ. ಅವುಗಳು ತಪ್ಪಾದ ಮೇಲೆ ಮತ್ತೆ ಪುನಃ ಅವುಗಳನ್ನು ನೋಡುವ ಧೈರ್ಯ ಮಾಡಿದ್ದೀರಿ. ಇವುಗಳ ಆಧಾರದಲ್ಲಿ ನಾನು ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಒಂದು ಸಿದ್ಧಾಂತ ಮಾಡಿದ್ದೇನೆ. ಈ ಸಿದ್ಧಾಂತಕ್ಕೆ ಪೇಟೆಂಟ್ ಆಗಿಲ್ಲ ಅಥವಾ ನೊಬೆಲ್ ಬಹುಮಾನವೂ ಬಂದಿಲ್ಲ. ಈ ಮತಗಟ್ಟೆ ಸಮೀಕ್ಷೆ ಎಂಬುದು ಒಮ್ಮೆ ತಪ್ಪಾದ ಮೇಲೆ ಮತ್ತೆ ತಪ್ಪು ಆಗುವುದಕ್ಕಾಗಿಯೇ ಮಾಡುವ ಜಗತ್ತಿನ ಪ್ರಪ್ರಥಮ ವೈಜ್ಞಾನಿಕ ಕೆಲಸ. ಇದರಲ್ಲಿ ಇನ್ನೂ ಒಂದು ಸಿದ್ಧಾಂತ ಹುಟ್ಟಿಕೊಂಡಿದೆ. ಅದೇನೆಂದರೆ, ಮತಗಟ್ಟೆ ಸಮೀಕ್ಷೆಗಳ ಅಂಕಿ ಅಂಶ ತಪ್ಪಾಗಬಹುದು, ಆದರೆ ಒಟ್ಟಾರೆ ಅವು ಹೇಳಿದ ಟ್ರೆಂಡ್ ಸರಿಯಿರುತ್ತದೆ ಎಂಬ ಸಿದ್ಧಾಂತ. ಎಲ್ಲ ಸಮೀಕ್ಷೆಗಳು ತಪ್ಪಾಗುವುದಿಲ್ಲ. ಕೆಲವು ಸರಿಯಾಗುವುದೂ ಇದೆ. ಈ ಬಾರಿಯ ಎಲ್ಲ ಸಮೀಕ್ಷೆಗಳಲ್ಲಿ ಬಿಜೆಪಿ ಸರಕಾರ ರಚಿಸುತ್ತಿದೆ. ಹಾಗಾದರೆ ಈ ಬಾರಿ ತಪ್ಪಾಗುವ ಸಮೀಕ್ಷೆ ಯಾವುದು ? ಅದು 23 ಕ್ಕೆ ಗೊತ್ತಾಗಲಿದೆ. ನ್ಯೂಸ್ ಚಾನಲ್ ಗಳು ಈ ಸಮೀಕ್ಷೆಗಳ ಬಗ್ಗೆ ಭಯಂಕರ ಗಂಭೀರವಾಗಿವೆ. ಆಸ್ಟ್ರೇಲಿಯಾದಲ್ಲೂ ಜನರು ಈ ಸಮೀಕ್ಷೆಗಳ ಬಗ್ಗೆ ಭಾರೀ ಸೀರಿಯಸ್ ಆಗಿದ್ದರು. ಅಲ್ಲಿ ನಡೆದ ಎಲ್ಲ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ತಪ್ಪಾಗಿವೆ. ಅಲ್ಲಿ ಮತಗಟ್ಟೆ ಸಮೀಕ್ಷೆ ಇರಲಿಲ್ಲ, ಆದರೆ ಚುನಾವಣಾ ಪೂರ್ವ ಸಮೀಕ್ಷೆಗಳು ತಪ್ಪಾಗಿವೆ.
 ಆದರೆ ಈ ಸಮೀಕ್ಷೆಗಳು ತಪ್ಪಾಗಿದ್ದರಿಂದ ಒಂದು ಒಳ್ಳೆ ಕೆಲಸ ಆಯಿತು. ಸಮೀಕ್ಷೆಯ ಫಲಿತಾಂಶ ನೋಡಿ ಅಲ್ಲಿನ ಲೇಬರ್ ಪಾರ್ಟಿ ಸಂಭ್ರಮಾಚರಣೆ ಮಾಡಿತು. ಆದರೆ ನಿಜವಾದ ಫಲಿತಾಂಶ ಬಂದ ಮೇಲೆ ಸಂಭ್ರಮಾಚರಣೆಯ ಸರದಿ ಲಿಬರಲ್ ಪಾರ್ಟಿಯದ್ದಾಯಿತು. ಇದರಿಂದ ಗಾಬರಿಯಾಗಬೇಕಿಲ್ಲ. ಈ ಸಮೀಕ್ಷೆಗಳು ಹಾಗೂ ಮತಗಟ್ಟೆ ಸಮೀಕ್ಷೆಗಳು ಎಲ್ಲ ಕಡೆ ತಪ್ಪಾಗಿವೆ. ಅಮೆರಿಕ ಮತ್ತು ಬ್ರಿಟನ್‌ನಂತಹ ದೇಶಗಳಲ್ಲಿ ಒಂದೇ ದಿನ ಮತದಾನ ನಡೆಯುತ್ತದೆ ಮತ್ತು ಅದೇ ದಿನ ಫಲಿತಾಂಶ ಬರುತ್ತದೆ. ಅಲ್ಲಿ ಈ ಮತಗಟ್ಟೆ ಸಮೀಕ್ಷೆ ಇರುವುದಿಲ್ಲ. ಏಕೆಂದರೆ ಮತದಾನ ನಡೆದು ಫಲಿತಾಂಶ ಬರುವ ನಡುವೆ ಬಹಳ ಕಡಿಮೆ ಸಮಯದ ಅಂತರವಿರುತ್ತದೆ. ಹಾಗಾಗಿ ಅಲ್ಲಿನ ಟಿವಿ ಚಾನಲ್‌ಗಳು ಮತದಾನ ಪೂರ್ವ ಸಮೀಕ್ಷೆಗಳನ್ನೇ ಇಟ್ಟುಕೊಂಡು ಟೈಮ್ ಪಾಸ್ ಮಾಡುತ್ತವೆ.


 ಭಾರತ ಹಾಗಲ್ಲ. ಇಲ್ಲಿ ಚುನಾವಣಾ ಸಮೀಕ್ಷೆ ಬಹಳ ಕಷ್ಟ. ಸೀಟುಗಳ ಸಂಖ್ಯೆಯೂ ಬಹಳ ದೊಡ್ಡದು. ಹಲವು ಸಂದರ್ಭಗಳಲ್ಲಿ ಇಲ್ಲಿ ಚುನಾವಣಾ ಆಯೋಗವೂ ಫಲಿತಾಂಶದ ಮೇಲೆ ಪ್ರಭಾವ ಬೀರುವ ಒಂದು ಅಂಶವಾಗಿರುತ್ತದೆ. ಅದು ಯಾವುದೇ ಸಮೀಕ್ಷೆಯಲ್ಲಿ ಕಾಣುವುದಿಲ್ಲ. ಈ ಚುನಾವಣಾ ಆಯೋಗದ ಪಾತ್ರವನ್ನು ಪರಿಗಣಿಸದ ಸಮೀಕ್ಷೆ ಸರಿಯಾಗುವುದು ಹೇಗೆ? ನೀವು ಮತಗಟ್ಟೆ ಸಮೀಕ್ಷೆ ತಪ್ಪಾಗುವ ಬಗ್ಗೆ ಯಾವುದೇ ರೀತಿಯಲ್ಲೂ ಗಾಬರಿಯಾಗಬೇಡಿ. ಅದರ ಬದಲು ಯಾವುದಾದರೂ ಸ್ಟಾರ್ಟ್ ಅಪ್ ಮೂಲಕ ಮತಗಟ್ಟೆ ಸಮೀಕ್ಷೆಯ ಬಿಸಿನೆಸ್ ಶುರು ಮಾಡುವುದಿದ್ದರೆ ಖಂಡಿತ ಮಾಡಿ. ನಾವು ನೋಡಿದ ಹಾಗೆ ಹಲವು ಕಂಪೆನಿಗಳು ಮಾಡಿರುವ ಸಮೀಕ್ಷೆಗಳು ತಪ್ಪಾಗುತ್ತವೆ. ಆದರೆ ಮುಂದಿನ ಚುನಾವಣೆಯಲ್ಲಿ ಆ ಕಂಪೆನಿಗಳಿಗೆ ಮತ್ತೆ ಬಿಸಿನೆಸ್ ಸಿಗುತ್ತದೆ. ಇದು ಎಂತಹ ಭರ್ಜರಿ ಬಿಸಿನೆಸ್ ಅಂದರೆ ಇಲ್ಲಿ ನೀವು ತಪ್ಪಾದರೆ ಮತ್ತೆ ತಪ್ಪುಮಾಡುವುದಕ್ಕಾಗಿಯೇ ನಿಮಗೆ ಅವಕಾಶ ಸಿಗುತ್ತದೆ. ಅದೆಷ್ಟೋ ಮತಗಟ್ಟೆ ಸಮೀಕ್ಷೆಗಳಿವೆ. ನಾವು ಅದನ್ನು ಮಾಡುವುದಿಲ್ಲ. ನಾವು ಎಲ್ಲ ಸಮೀಕ್ಷೆಗಳ ಸರಾಸರಿ ತೆಗೆಯುತ್ತೇವೆ. 2014ರಲ್ಲಿ ಬಿಜೆಪಿಗೆ 282 ಸ್ಥಾನ ಬಂದಿದ್ದವು. ಎನ್‌ಡಿಎಗೆ 336.
ಸುದರ್ಶನ್ ನ್ಯೂಸ್, ರಿಪಬ್ಲಿಕ್ ಸಿ ವೋಟರ್ , ರಿಪಬ್ಲಿಕ್ ಜನ್ ಕಿ ಬಾತ್, ಸುವರ್ಣ ನ್ಯೂಸ್ 24x 7, ಸಾಕ್ಷಿ ಟಿವಿ, ನ್ಯೂಸ್ ನೇಷನ್ ಇವೆಲ್ಲವುಗಳ ಸಮೀಕ್ಷೆ ಒಂದು ಕಡೆಯಾದರೆ ಅಮಿತ್ ಶಾ ಅವರ ಸಮೀಕ್ಷೆ ಇನ್ನೊಂದು ಕಡೆ. ಅವರು 300 ಸ್ಥಾನ ಬರಲಿವೆ, ಸುಲಭವಾಗಿ ಸರಕಾರ ಆಗಲಿದೆ ಎಂದು ಹೇಳಿದ್ದಾರೆ. ಯುಪಿಯಲ್ಲಿ 73ರಲ್ಲಿ ಒಂದೇ ಒಂದು ಸೀಟು ಕಡಿಮೆಯಾಗದು, 74 ಆಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದರು. 2014ರಲ್ಲಿ ಅವರು ಯುಪಿ ಉಸ್ತುವಾರಿಯಾಗಿದ್ದಾಗ ಅಲ್ಲಿ ಬಿಜೆಪಿಗೆ 72 ಸ್ಥಾನಗಳು ಬಂದಿದ್ದವು.
2015ರಲ್ಲಿ ಅಮಿತ್ ಶಾ ಬಿಹಾರದಲ್ಲಿ 185 ಸ್ಥಾನದ ಗುರಿಯಿಟ್ಟಿದ್ದರು. 99 ಸಿಕ್ಕಿತ್ತು. 86 ಕಡಿಮೆಯಾಯಿತು. 2016ರಲ್ಲಿ ಪಶ್ಚಿಮ ಬಂಗಾಳದಲ್ಲಿ 150ರ ಮಿಷನ್ ಘೋಷಿಸಿದ್ದರು. 3 ಬಂತು. 147 ಕಡಿಮೆಯಾಯಿತು. ಯುಪಿ ವಿಧಾನಸಭೆ ಚುನಾವಣೆಯಲ್ಲಿ 203ರ ಗುರಿಯಿತ್ತು, 325 ಬಂತು. 122 ಜಾಸ್ತಿ ಬಂತು. 2017ರಲ್ಲಿ ಗುಜರಾತ್ ನಲ್ಲಿ 150ರ ಗುರಿಯಿಟ್ಟಿದ್ದರು, 99 ಬಂತು. 51 ಕಡಿಮೆಯಾಯಿತು. 2017ರಲ್ಲಿ ಹಿಮಾಚಲ ಪ್ರದೇಶದಲ್ಲಿ 50 ಸ್ಥಾನ ಎಂದಿದ್ದರು. 44 ಬಂದವು. 6 ಕಡಿಮೆಯಾಯಿತು. 2018ರಲ್ಲಿ ಕರ್ನಾಟಕದಲ್ಲಿ 150ರ ಮಿಷನ್ ಘೋಷಿಸಿದ್ದರು, 104 ಬಂತು. 46 ಕಡಿಮೆಯಾಯಿತು.
ನೀವು ‘ಸೈಲೆಂಟ್ ವೋಟರ್’ (ಮೌನ ಮತದಾರ) ಬಗ್ಗೆ ಬಹಳ ಕೇಳಿರುತ್ತೀರಿ. ಈ ಸೈಲೆಂಟ್ ವೋಟರ್ ಅಂದರೆ ಏನು ? ಈತ ಹೆದರಿದ ಮತದಾರನೇ ಅಥವಾ ಈತನಿಗೆ ಸ್ವಂತ ರಣನೀತಿ ಇದೆಯೇ ? ಜಾಗತಿಕವಾಗಿ ಅಕಾಡಮಿಕ್ ಕ್ಷೇತ್ರದಲ್ಲಿ ಈ ಬಗ್ಗೆ ಹಲವು ದಶಕಗಳಿಂದಲೇ ಸಂಶೋಧನೆ ನಡೆಯುತ್ತಿದೆ. ನಾವು ಯಾವತ್ತಾದರೂ ಈ ಸೈಲೆಂಟ್ ವೋಟರ್ ಅನ್ನು ತಿಳಿದುಕೊಳ್ಳುವ ಸಾಧ್ಯತೆ ಇದೆಯೇ ? ಎಲ್ಲ ಲೆಕ್ಕಾಚಾರ ತಲೆಕೆಳಗಾಗಿಸುವವನೇ ಈ ಸೈಲೆಂಟ್ ವೋಟರ್. ಬಿಹಾರದಲ್ಲಿ ಲಾಲು ಯಾದವ್ ಇದೇ ಸೈಲೆಂಟ್ ವೋಟರ್ ಅನ್ನು ‘‘ಡಬ್ಬಿಯಿಂದ ಹೊರಬಂದ ಜೀನಿ’’ ಎನ್ನುತ್ತಾರೆ.

ಪ್ರಜಾಪ್ರಭುತ್ವದಲ್ಲಿ ಅಥವಾ ಸರ್ವಾಧಿಕಾರದಲ್ಲಿ ನಾಗರಿಕ ಮೌನವಾಗುವುದರ ಹಿಂದೆ ಬೇರೆ ಬೇರೆ ಕಾರಣಗಳಿರುತ್ತವೆ. ಇಂಗ್ಲಿಷ್‌ನಲ್ಲಿ ಇದನ್ನು ‘pluralistic ignorance’ ಎಂದು ಹೇಳಲಾಗುತ್ತದೆ. ಅಂದರೆ ಆ ವ್ಯಕ್ತಿ ಗುಂಪಲ್ಲಿ, ಸಾರ್ವಜನಿಕರೊಟ್ಟಿಗೆ ಇರುವಾಗ ಆ ಗುಂಪಿನಂತೆಯೇ ವರ್ತಿಸು ತ್ತಾನೆ, ಆದರೆ ಒಬ್ಬನೇ ಇರುವಾಗ ಅದರ ತದ್ವಿರುದ್ಧ ಯೋಚಿಸುತ್ತಾನೆ. ಈ ಬಗ್ಗೆ ಒಂದು ಪುಸ್ತಕ ಇದೆ. ಕ್ರಿಸ್ಟಿನಾ ಬಿಖೈರಿ ಅವರ The grammar of society  ಎಂಬ ಪುಸ್ತಕ. ತಿಮುರ್ ಕುರನ್ ಎಂಬವರ Private Lies, Public Truths ಇನ್ನೊಂದು ಪುಸ್ತಕದಲ್ಲಿ ಪೂರ್ವ ಯುರೋಪ್ ನ ಕಮ್ಯುನಿಸ್ಟ್ ಸರಕಾರಗಳ ಪತನದ ಕುರಿತು ಚರ್ಚಿಸಲಾಗಿದೆ. ಸೋವಿಯತ್ ಯೂನಿಯನ್ ಪತನಗೊಂಡಾಗ ಪೂರ್ವ ಯುರೋಪ್‌ನಲ್ಲಿ ಹಲವು ಕಮ್ಯುನಿಸ್ಟ್ ಸರಕಾರಗಳು ಬಿದ್ದವು. ಈ ಬಗ್ಗೆ ಯಾರೂ ಊಹಿಸಿಯೇ ಇರಲಿಲ್ಲ. ಏಕೆಂದರೆ ಸಾರ್ವಜನಿಕವಾಗಿ ಜನರು ಈ ಸರಕಾರಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರು, ಆದರೆ ವೈಯಕ್ತಿಕವಾಗಿ ವಿರೋಧಿಸುತ್ತಿದ್ದರು. ನಾನು ಈ ಎರಡೂ ಪುಸ್ತಕಗಳನ್ನು ಓದಿದ್ದೇನೆ. ಆದರೆ ನನ್ನ ಮಿತ್ರ ವತ್ಸಲ ಈ ಸೈಲೆಂಟ್ ವೋಟರ್ ಬಗ್ಗೆ ಜನರಿಗೆ ಸ್ವಲ್ಪಹೇಳಬೇಕು ಎಂದು ಸಲಹೆ ನೀಡಿದರು. ಜನರಿಗೆ ಸಾರ್ವಜನಿಕವಾಗಿ ಹೇಳಲು ಭಯವಾದರೆ ಮತ್ತು ಅಂತಹ ಸ್ವಾತಂತ್ರ್ಯ ಇಲ್ಲವಾದರೆ ಅವರು ಸುಮ್ಮನಾಗುತ್ತಾರೆ. ಈ ಎರಡೂ ಅಧ್ಯಯನಗಳು ಸರ್ವಾಧಿಕಾರಿ ಸರಕಾರಗಳ ಬಗ್ಗೆ ನಡೆದಿದ್ದು. ಭಾರತದಲ್ಲಿರುವುದು ಪ್ರಜಾಪ್ರಭುತ್ವ. ಭಾರತದಂತಹ ಸ್ವತಂತ್ರ ದೇಶದಲ್ಲಿ ಈ ಸೈಲೆಂಟ್ ವೋಟರ್ ಅನ್ನು ಗುರುತಿಸುವುದು, ಅರ್ಥಮಾಡಿಕೊಳ್ಳುವುದು ಸಾಧ್ಯವೇ? ಆತನನ್ನು ಗುರುತಿಸುವುದಾದರೂ ಹೇಗೆ?

Writer - ರವೀಶ್ ಕುಮಾರ್

contributor

Editor - ರವೀಶ್ ಕುಮಾರ್

contributor

Similar News

ಜಗದಗಲ
ಜಗ ದಗಲ