ಸುದೀರ್‌ಮನ್ ಕಪ್: ಭಾರತಕ್ಕೆ ನಾಕೌಟ್ ಗುರಿ

Update: 2019-05-21 05:14 GMT

ನಾನ್ನಿಂಗ್, ಮೇ 20: ಸುದೀರ್‌ಮನ್ ಕಪ್‌ನಲ್ಲಿ ಮೊದಲ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ತಂಡ ಮಂಗಳವಾರ ಲೀ ಚಾಂಗ್ ವೀ ನೇತೃತ್ವದ ತಂಡವನ್ನು ಎದುರಿಸಲಿದೆ.

ಭಾರತ 2011 ಮತ್ತು 2017ರ ಆವೃತ್ತಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಭಾರತ ಎದುರಿಸಲಿದೆ.

ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ ಮಲೇಷ್ಯಾ ತಂಡ 0-5 ಅಂತರದಲ್ಲಿ ಸೋಲು ಅನುಭವಿಸಿತ್ತು. ಭಾರತದ ವಿರುದ್ಧ ಮಲೇಷ್ಯಾ ಸೋಲು ಅನುಭವಿಸಿದರೆ ಕೂಟದಿಂದ ನಿರ್ಗಸಮಿಸಲಿದೆ.

 ಮಲೇಷ್ಯಾ ವಿರುದ್ಧ ಭಾರತ ಗೆಲುವು ಸಾಧಿಸಿದರೆ ಮುಂದಿನ ಪಂದ್ಯದಲ್ಲಿ ಚೀನಾದ ಸವಾಲು ಎದುರಾಗಲಿದೆ.

 13 ಸದಸ್ಯರ ತಂಡ 8ನೇ ಸ್ಥಾನದೊಂದಿಗೆ ಟೂರ್ನಮೆಂಟ್ ಪ್ರವೇಶಿಸಿದೆ.2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಲೇಷ್ಯಾವನ್ನು ಮಣಿಸಿದ್ದ ಭಾರತ ಚಿನ್ನ ಪಡೆದಿತ್ತು.

 ಮಿಕ್ಸೆಡ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲುವ ಅವಕಾಶ ಇದೆ. ಶ್ರೇಷ್ಠ ಆಟಗಾರರಾದ ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್‌ನಲ್ಲಿ ಜಯ ಗಳಿಸಿದ್ದಪಿ.ವಿ.ಸಿಂಧು, 2019 ಇಂಡೋನೇಶ್ಯಾ ಮಾಸ್ಟರ್ ಚಾಂಪಿಯನ್ ಸೈನಾ ನೆಹ್ವಾಲ್, 2019 ಇಂಡಿಯಾ ಓಪನ್ ಫೈನಲ್‌ನಲ್ಲಿ ಜಯಿಸಿದ್ದ ಕೆ. ಶ್ರೀಕಾಂತ್ ಮತ್ತು ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ನ್‌ಲ್ಲಿ ಫೈನಲ್ ತಲುಪಿದ್ದ ಸಮೀರ್ ವರ್ಮಾ ಅವರು ತಂಡದಲ್ಲಿದ್ದಾರೆ.

ಶ್ರೀಕಾಂತ್ ಇಂಡಿಯಾ ಓಪನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಅವರಿಗೆ ಝಿ ಝಿಯಾ ಸವಾಲು ಎದುರಾಗಲಿದೆ. ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಗಾಯದಿಂದ ಚೇತರಿಸಿಕೊಂಡು ವಾಪಸಾಗಿದ್ದಾರೆ. ಪುರುಷರ ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಅವರು ಸಾತ್ವಿಕ್‌ಗೆ ಸಾಥ್ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News