ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಈ ಕಾರು ಮಾಲಕಿ ಮಾಡಿದ ಐಡಿಯ ಮಾತ್ರ......

Update: 2019-05-21 09:25 GMT

ಹೊಸದಿಲ್ಲಿ : ತಾಪಮಾನ ದಿನದಿಂದ ದಿನಕ್ಕೆ ಏರುತ್ತಿರುವಂತೆಯೇ ಸುಡುವ ಬಿಸಿನಿಂದ ತಪ್ಪಿಸಿಕೊಳ್ಳಲು ಜನರು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೆ ಅಹ್ಮದಾಬಾದ್ ನಿವಾಸಿಯೊಬ್ಬರು ತನ್ನ ಕಾರನ್ನು ಬೇಸಿಗೆಯ ಝಳದಲ್ಲೂ ತಂಪಾಗಿಸಲು ಮಾಡಿದ ಐಡಿಯಾ ಅಂತೂ ವಿಶಿಷ್ಟ. ಈ ಮಹಿಳೆ ತನ್ನ ಕಾರಿನ ಹೊರಮೈಯ್ಯನ್ನು ಸಂಪೂರ್ಣವಾಗಿ ದನದ ಸೆಗಣಿಯಿಂದ ಮುಚ್ಚಿ ಬಿಟ್ಟಿದ್ದಾರೆ. ಅವರ ಈ ವಿಶಿಷ್ಟ ಐಡಿಯಾದ ಫೋಟೋಗಳು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದ್ದು ಅವುಗಳು ವೈರಲ್ ಆಗಿವೆ.

ರೂಪೇಶ್ ಗೌರಂಗ ದಾಸ್ ಎಂಬ ಫೇಸ್ ಬುಕ್ ಖಾತೆದಾರರು ಸೆಗಣಿ ಸವರಿದ ಕಾರಿನ ಚಿತ್ರ ಪೋಸ್ಟ್ ಮಾಡಿ "ಬೆಸ್ಟ್ ಯೂಸ್ ಆಫ್ ಕೌ ಡಂಗ್ ಐ ಹ್ಯಾವ್ ಎವರ್ ಸೀನ್'' ಎಂದು ಉದ್ಘರಿಸಿದ್ದಾರೆ.

"ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದ್ದರಿಂದ ಕಾರನ್ನು ರಕ್ಷಿಸುವ ಸಲುವಾಗಿ ಸೇಜಲ್ ಶಾ ಎಂಬಾಕೆ ತಮ್ಮ ಸೀಡನ್ ಕಾರಿನ ಹೊರಮೈಗೆ ಸಂಪೂರ್ಣವಾಗಿ ಸೆಗಣಿಯಿಂದ ಪ್ಲಾಸ್ಟರ್ ಮಾಡಿದ್ದಾರೆ'' ಎಂದು ಅವರು ಬರೆದಿದ್ದಾರೆ.

ಹಲವರಿಗೆ ಈ ಐಡಿಯಾ ಅಚ್ಚರಿ ಮೂಡಿಸಿದ್ದು ಕಾರಿನಲ್ಲಿ ಪಯಣಿಸುವವರು ಸೆಗಣಿಯ ವಾಸನೆಯನ್ನು ಸದಾ ಹೇಗೆ ತಾಳಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದವರೂ ಹಲವರಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News