ಗಾಢನಿದ್ದೆಯಲ್ಲಿ ಮಗುವನ್ನು ನೀರಿನಲ್ಲಿ ಮುಳುಗಿಸಿದ ತಾಯಿ: ಬಂಧನ

Update: 2019-05-21 14:50 GMT

ಕೋಟ, ಮೇ.21: ಗಾಢ ನಿದ್ದೆಯಲ್ಲಿದ್ದ ಮಹಿಳೆಯೊಬ್ಬರು ತನ್ನ ಆರು ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿದ ಘಟನೆ ರಾಜಸ್ತಾನದ ಕೋಟದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೀಪಿಕಾ ಗುಜ್ಜರ್ ಎಂಬಾಕೆಯನ್ನು ಬಂಧಿಸಿದ್ದು ಆಕೆಯ ವಿರುದ್ಧ ಐಪಿಸಿ 302ನೇ ವಿಧಿಯಡಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಯಾರಿಗೂ ತಿಳಿಸದ ಮಹಿಳೆ ತನ್ನ ಪತಿ ಮತ್ತು ಅತ್ತೆಯ ಜೊತೆ ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ನಂತರ ಆಕೆಯ ಮನೆಯ ನೀರಿನ ಟ್ಯಾಂಕ್‌ನಲ್ಲಿ ಮಗು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ರವಿವಾರ ಮಧ್ಯಾಹ್ನ ವರದಿಯಾಗಿದ್ದರೂ ಸೋಮವಾರ ಮಧ್ಯಾಹ್ನದ ವರೆಗೆ ಮಹಿಳೆ ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದರು. ಆದರೆ ತೀವ್ರ ವಿಚಾರಣೆ ನಡೆಸಿದಾಗ ಕುಸಿದುಬಿದ್ದ ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ತಾನು ತನಗೆ ಅರಿವಿಲ್ಲದಂತೆ ಮಗುವನ್ನು ನೀರಿನ ಟ್ಯಾಂಕ್ ಬಳಿ ಕೊಂಡೊಯ್ದು ಅದರಲ್ಲಿ ಮುಳುಗಿಸಿದ್ದೇನೆ ಎಂದಾಕೆ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಮಗು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಮಹಿಳೆ ಈ ರೀತಿ ಮಾಡಲು ಏನು ಕಾರಣ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News