ಭಾರತದ ಅತಿ ದೊಡ್ಡ ದ್ರವೀಕೃತ ಹೈಡ್ರೋಜನ್ ಸಾಗಾಟ ಟ್ಯಾಂಕ್‌ಗೆ ಹಸಿರು ನಿಶಾನೆ

Update: 2019-05-22 17:36 GMT

ಅಮರಾವತಿ, ಮೇ 22: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸ್ರೀ ಸಿಟಿಯಲ್ಲಿರುವ ವಿಆರ್‌ಎ ಏಶ್ಯಾ ಪೆಸಿಫಿಕ್ಸ್ ಉತ್ಪಾದನಾ ಘಟಕದಲ್ಲಿ ಭಾರತದ ಅತಿ ದೊಡ್ಡ ದ್ರವೀಕೃತ ಹೈಡ್ರೊಜನ್ ಸಾಗಾಟ ಟ್ಯಾಂಕ್‌ಗೆ ಇಸ್ರೊ ಅಧ್ಯಕ್ಷ ಕೆ. ಸಿವನ್ ಬುಧವಾರ ಹಸಿರು ನಿಶಾನೆ ತೋರಿಸಿದರು.

 ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ವಿಆರ್‌ವಿ ಏಷಿಯಾ ಪೆಸಿಫಿಕ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಸಹಯೋಗದೊಂದಿಗೆ ದ್ರವೀಕೃತ ನೈಟ್ರೊಜನ್ ರಕ್ಷಣೆ ಹೊಂದಿರುವ ದಾಸ್ತಾನು ಟ್ಯಾಂಕ್ ಅನ್ನು ನಿರ್ಮಿಸಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಈ ಟ್ಯಾಂಕ್‌ನ ದಾಸ್ತಾನು ಸಾಮರ್ಥ್ಯ 120 ಕಿಲೋ ಲೀಟರ್. ದ್ರವೀಕೃತ ಹೈಡ್ರೋಜನ್ ಅನ್ನು ಉಪಗ್ರಹ ಉಡಾವಣಾ ವಾಹನಗಳಿಗೆ ಬಳಸಲಾಗುತ್ತದೆ. ಸಮಾರಂಭದಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ. ಸಿವನ್, ಇಂತಹ ಸುಧಾರಿತ ಆವೃತ್ತಿಯ ದ್ರವೀಕೃತ ಹೈಡ್ರೋಜನ್ ಟ್ಯಾಂಕ್‌ನ ಅವಶ್ಯಕತೆ ಅರಿತುಗೊಂಡ ನಿರ್ಮಿಸಿರುವುದಕ್ಕೆ ವಿಆರ್‌ವಿ ತಂಡ ಹಾಗೂ ಇತರ ತಂಡಗಳಿಗೆ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News