ನೂತನವಾಗಿ ಆಯ್ಕೆಯಾದ ಸಂಸದರಿಗೆ ಹೊಟೇಲ್‌ಗಳಲ್ಲಿ ತಂಗುವ ವ್ಯವಸ್ಥೆ ಇಲ್ಲ

Update: 2019-05-22 17:42 GMT

ಹೊಸದಿಲ್ಲಿ, ಮೇ 22: ಸಂಸತ್ತಿನ ಕೆಳಮನೆಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಹೊಟೇಲ್‌ನ ಲಾಡ್ಜ್‌ಗಳಲ್ಲಿ ತಂಗಲು ಇನ್ನು ಮುಂದೆ ಅವಕಾಶ ಇಲ್ಲ. ಆದರೆ, ರಾಜ್ಯ ಭವನಗಳು, ಸಂಸದೀಯರಿಗಿರುವ ತಂಗುವ ಹೊಟೇಲ್‌ಗಳು ಹಾಗೂ ಅದಕ್ಕೆ ಸಂಬಂಧಿಸಿದ ಕಟ್ಟಡಗಳಲ್ಲಿ ತಂಗಬಹುದು ಎಂದು ಲೋಕಸಭಾ ಪ್ರಧಾನ ಕಾರ್ಯದರ್ಶಿ ಸ್ನೇಹಲತಾ ಶ್ರೀವಾತ್ಸವ ಬುಧವಾರ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಮತ ಎಣಿಕೆ ಗುರುವಾರ ನಡೆಯುವುದರೊಂದಿಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಶುಕ್ರವಾರದಿಂದ ಹೊಸದಿಲ್ಲಿಗೆ ಆಗಮಿಸುವ ಸಾಧ್ಯತೆ ಇದೆ. ಈ ಹಿಂದೆ ಸಂಸದರು ಹೆಚ್ಚಾಗಿ ಹೊಟೇಲ್‌ಗಳಲ್ಲಿ ತಂಗುತ್ತಿದ್ದರು. ಇದರಿಂದ ಸರಕಾರದ ಬೊಕ್ಕಸಕ್ಕೆ ದೊಡ್ಡ ಮೊತ್ತದ ಹೊರೆಯಾಗುತ್ತಿದೆ ಎಂಬ ಟೀಕೆ ಕೇಳಿ ಬಂದಿತ್ತು. ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ವೆಸ್ಟರ್ನ್ ಕೋರ್ಟ್, ಅದರ ನೂತನ ಕಟ್ಟಡ, ವಿವಿಧ ರಾಜ್ಯಭವನಗಳಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಆದುದರಿಂದ ಹೊಟೇಲ್‌ಗಳಲ್ಲಿ ತಂಗುವ ವ್ಯವಸ್ಥೆಯನ್ನು ಲೋಕಸಭಾ ಸಕ್ರೇಟರಿಯೇಟ್ ರದ್ದುಗೊಳಿಸಿದೆ ಎಂದು ಶ್ರೀವಾತ್ಸವ ಪತ್ರಕರ್ತರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News