ಚೀನಾದ ಸರಕುಗಳ ಮೇಲಿನ ಸುಂಕ ಅನಾಹುತಕಾರಿ: ಅಡಿಡಸ್, ನೈಕ್, ಪೂಮಾ ಕಳವಳ

Update: 2019-05-22 18:02 GMT

ವಾಶಿಂಗ್ಟನ್, ಮೇ 22: ಚೀನಾದೊಂದಿಗಿನ ವ್ಯಾಪಾರ ಸಮರಕ್ಕೆ ಶೂ ಉದ್ಯಮ ಬಲಿಯಾಗುವುದನ್ನು ತಡೆಯಿರಿ ಎಂಬುದಾಗಿ ಜಾಗತಿಕ ಕ್ರೀಡಾ ಶೂ ತಯಾರಿಕಾ ಕಂಪೆನಿಗಳಾದ ಅಡಿಡಸ್, ನೈಕ್ ಮತ್ತು ಪೂಮಾಗಳು ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿವೆ.

ಹೊಸದಾಗಿ ವಿಧಿಸಲಾಗಿರುವ ಆಮದು ತೆರಿಗೆಗಳು ಅನಹುತಕಾರಿ ಎಂಬುದಾಗಿ ಅವು ಬಣ್ಣಿಸಿವೆ.

ಈಗಾಗಲೇ ಅಮೆರಿಕದ ಇತರ 170ಕ್ಕೂ ಅಧಿಕ ಶೂ ತಯಾರಿಕಾ ಕಂಪೆನಿಗಳು ಮತ್ತು ಶೂ ಮಾರಾಟಗಾರರು, ಚೀನಾದ ಸರಕುಗಳ ಮೇಲೆ ಹೊಸದಾಗಿ ವಿಧಿಸಿರುವ ತೆರಿಗೆಗಳಿಂದ ಪಾದರಕ್ಷೆಗಳನ್ನು ಹೊರಗಿಡುವಂತೆ ಟ್ರಂಪ್‌ಗೆ ಮನವಿ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

‘‘ಪಾದರಕ್ಷೆಗಳ ಮೇಲೆ ಹೆಚ್ಚುವರಿಯಾಗಿ 25 ಶೇಕಡ ಸುಂಕ ವಿಧಿಸುವ ಪ್ರಸ್ತಾವವು ನಮ್ಮ ಬಳಕೆದಾರರು, ನಮ್ಮ ಕಂಪೆನಿಗಳು ಹಾಗೂ ಒಟ್ಟಾರೆ ಅಮೆರಿಕದ ಆರ್ಥಿಕತೆಗೆ ಅನಾಹುತಕಾರಿ’’ ಎಂಬುದಾಗಿ ಈ ಮೂರು ಕಂಪೆನಿಗಳು ಟ್ರಂಪ್‌ಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News