×
Ad

ಒಮಾನ್: ಪ್ರವಾಸ ಹೋಗಿದ್ದ ಭಾರತೀಯ ಕುಟುಂಬದ 6 ಸದಸ್ಯರು ನೀರುಪಾಲು

Update: 2019-05-24 22:47 IST

ದುಬೈ, ಮೇ 24: ಒಮಾನ್ ದೇಶದಲ್ಲಿ ಸುರಿದ ಭೀಕರ ಮಳೆಯ ಬಳಿಕ ನಾಪತ್ತೆಯಾಗಿದ್ದ ಭಾರತೀಯ ಆರೋಗ್ಯ ಶುಶ್ರೂಷಕಿಯೊಬ್ಬರ ಕುಟುಂಬದ ಆರು ಸದಸ್ಯರ ಪೈಕಿ ನಾಲ್ವರ ಮೃತದೇಹಗಳು ನೆರೆಪೀಡಿತ ಪ್ರದೇಶವೊಂದರಲ್ಲಿ ಪತ್ತೆಯಾಗಿವೆ.

ರಕ್ಷಣಾ ತಂಡಗಳು ನಾಪತ್ತೆಯಾದವರಿಗಾಗಿ ಬೃಹತ್ ಶೋಧ ಕಾರ್ಯಾಚರಣೆ ನಡೆಸುತ್ತಿದ್ದವು.

ವಲಸಿಗ ಕುಟುಂಬದ ಆರು ಮಂದಿ ಸದಸ್ಯರಿಗಾಗಿ ಶೋಧ ನಡೆಸುತ್ತಿದ್ದ ರಕ್ಷಣಾ ತಂಡಗಳು ಪ್ರವಾಹ ಪೀಡಿತ ಪ್ರದೇಶದಿಂದ ನಾಲ್ವರ ಶವಗಳನ್ನು ಪತ್ತೆಹಚ್ಚಿವೆ ಎಂದು ರೋಯಲ್ ಒಮಾನ್ ಪೊಲೀಸರು ಗುರುವಾರ ಹೇಳಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಭಾರತೀಯ ಆರೋಗ್ಯ ಶುಶ್ರೂಷಕಿಯ ಕುಟುಂಬವು ಶನಿವಾರ ಮಸ್ಕತ್‌ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ವಾಡಿ ಬಾನಿ ಖಾಲಿದ್ ಎಂಬ ಸ್ಥಳಕ್ಕೆ ಪ್ರವಾಸ ಹೋಗಿತ್ತು. ಅಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಅವರು ತಮ್ಮ ವಾಹನದಲ್ಲೇ ಸಿಕ್ಕಿಹಾಕಿಕೊಂಡಿದ್ದರು..

ಯಜಮಾನನ ತಂದೆ-ತಾಯಿ, ಪತ್ನಿ ಮತ್ತು ಮೂವರು ಮಕ್ಕಳು ಸೇರಿದಂತೆ ಕುಟುಂಬದ ಇತರ ಸದಸ್ಯರು ನಾಪತ್ತೆಯಾಗಿದ್ದರು. ಅವರ ವಾಹನವು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿತ್ತು.

ಅವರನ್ನು ಪತ್ತೆಹಚ್ಚುವುದಕ್ಕಾಗಿ ರಕ್ಷಣಾ ಸಿಬ್ಬಂದಿ ಶನಿವಾರದಿಂದ ಬೃಹತ್ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News