ಚೀನಾ: ಗಂಟೆಗೆ 600 ಕಿ.ಮೀ. ವೇಗದ ರೈಲು ಅನಾವರಣ

Update: 2019-05-24 17:52 GMT

ಬೀಜಿಂಗ್, ಮೇ 24: ಮ್ಯಾಗ್ನೆಟಿಕ್ ಲೆವಿಟೇಶನ್ ರೈಲಿನ ಮಾದರಿಯೊಂದನ್ನು ಚೀನಾ ಗುರುವಾರ ಅನಾವರಣಗೊಳಿಸಿದೆ. ಗಂಟೆಗೆ 600 ಕಿ.ಮೀ. ಗರಿಷ್ಠ ವೇಗ ಹೊಂದಿರುವ ಈ ರೈಲು ವಾಯುಯಾನ ಉದ್ಯಮಕ್ಕೆ ನೇರ ಸ್ಪರ್ಧೆ ನೀಡಬಹುದಾಗಿದೆ ಎಂದು ಅದರ ಉತ್ಪಾದಕರು ಹೇಳುತ್ತಾರೆ.

ಚೀನಾ ಸರಕಾರದ ಮಾಲೀಕತ್ವದ ಸಿಆರ್‌ಆರ್‌ಸಿ ಕಿಂಗಾಡೊ ಸಿಫಂಗ್ ಕಂಪೆನಿಯು ವಿನ್ಯಾಸಗೊಳಿಸಿರುವ ಹಾಗೂ ನಿರ್ಮಿಸಿರುವ ರೈಲನ್ನು ಶಾಂಡಾಂಗ್ ಪ್ರಾಂತದ ಕಿಂಗಾಡೊ ನಗರದಲ್ಲಿ ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಯಿತು ಎಂದು ‘ಚೀನಾ ಡೇಲಿ’ ಶುಕ್ರವಾರ ವರದಿ ಮಾಡಿದೆ.

2021ರಲ್ಲಿ ಅದು ಸಮಗ್ರ ಪರೀಕ್ಷೆಗೆ ಒಳಪಟ್ಟ ಬಳಿಕ, ಅದರ ವಾಣಿಜ್ಯ ನಿರ್ಮಾಣ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News