×
Ad

ವ್ಯಕ್ತಿಯ ಹೊಟ್ಟೆಯಿಂದ ಚೂರಿ, ಚಮಚ, ಸ್ಕ್ರೂಡ್ರೈವರ್ ಹೊರ ತೆಗೆದ ವೈದ್ಯರು !

Update: 2019-05-25 12:47 IST

ಮನಾಲಿ : ಇಲ್ಲಿನ ಮಂಡಿ ಎಂಬಲ್ಲಿನ  ಶ್ರೀ ಲಾಲ್ ಬಹಾದುರ್ ಶಾಸ್ತ್ರಿ ಸರಕಾರಿ  ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು  ಹೊಟ್ಟೆ ನೋವಿನ ಸಮಸ್ಯೆ ಎದುರಿಸುತ್ತಿದ್ದ 35 ವರ್ಷದ ವ್ಯಕ್ತಿಯೊಬ್ಬನಿಗೆ ಶಸ್ತ್ರಕ್ರಿಯೆ ನಡೆಸಿ ಆತನ ಹೊಟ್ಟೆಯಿಂದ ಒಂದು ಚೂರಿ, ಎಂಟು ಚಮಚ, ಎರಡು ಸ್ಕ್ರೂಡ್ರೈವರ್, ಎರಡು ಟೂತ್ ಬ್ರಶ್ ಹಾಗೂ ಒಂದು ಸಣ್ಣ ಸ್ಟೀಲ್ ಬಾರ್ ಹೊರ ತೆಗೆದಿದ್ದಾರೆ.

ಮಂಡಿ ಎಂಬಲ್ಲಿನ ಸುಂದರ ನಗರ ನಿವಾಸಿಯಾಗಿರುವ ಈ ವ್ಯಕ್ತಿ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾನೆನ್ನಲಾಗಿದ್ದು ಆತನ ಹೊಟ್ಟೆಯಿಂದ ಚೂರಿಯ ಅಲಗು ಹೊರ ಇಣುಕುತ್ತಿರುವುದನ್ನು ಕಂಡು ಆತನ ಕುಟುಂಬ ಆತನನ್ನು ಆಸ್ಪತ್ರೆಗೆ ದಾಖಲಿಸಿತ್ತು. ವೈದ್ಯರು ತಕ್ಷಣ ಆತನನ್ನು ಶಸ್ತ್ರಕ್ರಿಯೆ ಕೊಠಡಿಗೊಯ್ದು ಎಕ್ಸ್-ರೇ ತೆಗೆದ ವೇಳೆ ಆತನ ಹೊಟ್ಟೆಯಲ್ಲಿರುವ ಹಲವಾರು ವಸ್ತುಗಳನ್ನು ನೋಡಿ ದಂಗಾಗಿ ಶಸ್ತ್ರಕ್ರಿಯೆ ನಡೆಸಿ ಅವೆಲ್ಲವನ್ನೂ ಹೊರತೆಗೆದಿದ್ದಾರೆ. ಶಸ್ತ್ರಕ್ರಿಯೆಗೆ ಸುಮಾರು ನಾಲ್ಕು ಗಂಟೆ ತಗಲಿತ್ತು. ರೋಗಿಯ ಸ್ಥಿತಿ ಈಗ ಸ್ಥಿರವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News