ಜೈಲಿನಲ್ಲಿ ದೊಂಬಿ; 29 ಕೈದಿಗಳ ಮೃತ್ಯು

Update: 2019-05-25 17:46 GMT

ಅಕಾರಿಗುವ,ಮೇ 25: ವೆನೆಝುವೆಲಾದ ಅಕಾರಿಗುವ ನಗರದ ಕಾರಾಗೃಹದಲ್ಲಿ ಶುಕ್ರವಾರ ನಡೆದ ಭೀಕರ ದೊಂಬಿಯಲ್ಲಿ ಕನಿಷ್ಠ 29 ಮಂದಿ ಕೈದಿಗಳು ಸಾವನ್ನಪ್ಪಿದ್ದಾರೆ ಹಾಗೂ 19 ಮಂದಿ ಪೊಲೀಸರು ಗಾಯಗೊಂಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಜೈಲಿಗೆ ಆಗಮಿಸಿದ ಸಂದರ್ಶಕರನ್ನು ಕೈದಿಗಳು ಒತ್ತೆಸೆರೆಯಿರಿಸಿದಾಗ ಅವರನ್ನು ಬಿಡುಗಡೆಗೊಳಿಸಲು ಪೊಲೀಸ್ ಅಧಿಕಾರಿಗಳು ಯತ್ನಿಸಿದ್ದರು.ಆಗ ಘರ್ಷಣೆ ಭುಗಿಲೆದ್ದಿತೆಂದು ಕೈದಿಗಳ ಹಕ್ಕುಗಳ ಸಂಘಟನೆಯೊಂದು ತಿಳಿಸಿದೆ.

ಆಯುಧಗಳನ್ನು ಹೊಂದಿದ್ದ ಕೈದಿಗಳು ಪೊಲೀಸರೆಡೆಗೆ ಗುಂಡುಹಾರಿಸಿದ್ದಲ್ಲದೆ,ಎರಡು ಗ್ರೆನೇಡ್‌ಗಳನ್ನು ಸ್ಫೋಟಿಸಿದರೆಂದು ಸಂಘಟನೆಯ ನಿರ್ದೇಶಕ ಕಾರ್ಲೊಸ್ ನಿಯೊಟೊ ತಿಳಿಸಿದ್ದಾರೆ.

ಆದಾಗ್ಯೂ ವೆನಿಝುವೆಲಾದ ಕಾರಾಗೃಹ ನಿರೀಕ್ಷಣಾ ಹಕ್ಕುಗಳ ಸಂಘಟನೆಯೊಂದು ಪೊಲೀಸರು, ಜೈಲಿನೊಳಗೆ ಶೋಧ ಕಾರ್ಯಾಚರಣೆ ನಡೆಸಿದಾಗ ಹಾಗೂ ಮಹಿಳಾ ಸಂದರ್ಶಕಿಯರನ್ನು ತೆರವುಗೊಳಿಸಲು ಯತ್ನಿಸಿದಾಗ ಗಲಭೆ ಭುಗಿಲೆದ್ದಿತೆಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News