ಶ್ರೀಲಂಕಾ ದಾಳಿಗೆ ತಮಿಳುನಾಡು ಮೂಲದ ಸಂಘಟನೆಯ ಕುಮ್ಮಕ್ಕು: ವಿವಾದಾತ್ಮಕ ಬೌದ್ಧ ಧರ್ಮಗುರು ಆರೋಪ

Update: 2019-05-25 17:57 GMT

ಕೊಲಂಬೊ,ಮೇ 25:ಶ್ರೀಲಂಕಾದ ಭಯೋತ್ಪಾದಕ ಸಂಘಟನೆ ಎನ್‌ಟಿಜೆಗೆ ಕಳೆದ ಎಪ್ರಿಲ್‌ನಲ್ಲಿ ಈಸ್ಟರ್ ರವಿವಾರದಂದು ಭೀಕರವಾದ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಲು ತಮಿಳುನಾಡು ಮೂಲದ ಸಂಘಟನೆಯೊಂದು ಪ್ರಚೋದನೆ ನೀಡಿತ್ತೆಂದು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿರುವ ಶ್ರೀಲಂಕಾದ ವಿವಾದಾತ್ಮಕ ಬೌದ್ಧ ಧರ್ಮಗುರುವೊಬ್ಬರು ಆರೋಪಿಸಿದ್ದಾರೆ.

ಶುಕ್ರವಾರ ಕೊಲಂಬೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೀವ್ರವಾದಿ ಬೌದ್ಧ ಸನ್ಯಾಸಿ ಗಾಲಗೊದ್ದಾಟ್ಟೆ ಜ್ಞಾನಸಾರ ಅವರು, ತಮಿಳುನಾಡು ತೌಹೀದ್ ಜಮಾತ್ (ಟಿಎನ್‌ಟಿಜೆ) ಸಂಘಟನೆಗೆ ಸೇರಿದವಾದ ಅಯೂಬ್ ಹಾಗೂ ಅಬ್ದೀನ್ ಶ್ರೀಲಂಕಾಗೆ ಭೇಟಿ ನೀಡಿದ್ದರೆಂದು ಆರೋಪಿಸಿದ್ದಾರೆ.

   ‘‘ಇವರಿಬ್ಬರು ಉಗ್ರವಾದಿ ಅಬ್ದುಲ್ ರಾಝಿಕ್‌ನನ್ನು ಭೇಟಿಯಾಗಿದ್ದರು. ಮುಸ್ಲಿಮರ ಮೇಲೆ ದಾಳಿ ನಡೆಸುವಂತೆ ಬೌದ್ಧರನ್ನು ಕೆರಳಿಸುವುದು ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಅವರು ಬುದ್ಧನನ್ನು ನಿಂದಿಸುವಂತಹ ಕಥೆಗಳನ್ನು ಹರಡಿದ್ದರು’’ ಎಂದು ಜ್ಞಾನಸಾರ ತಿಳಿಸಿದ್ದಾರೆ.

ನ್ಯಾಯಾಂಗ ನಿಂದನೆಯ ಆರೋಪಕ್ಕೆ ಸಂಬಂಧಿಸಿ ಕಳೆದ ರ್ಷ ಸ್ಥಳೀಯ ನ್ಯಾಯಾಲಯವೊಂದು ಜ್ಞಾನಸಾರ ಅವರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಸಿರಿಸೇನಾ ಅವರ ಕ್ಷಮಾದಾನದ ಹಿನ್ನೆಲೆಯಲ್ಲಿ, ಅವರು 9 ತಿಂಗಳುಗಳ ಜೈಲು ವಾಸ ಅನುಭವಿಸಿದ ಬಳಿಕ ಬಿಡುಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News