ಚೀನಾ: ಹಡಗಿನಲ್ಲಿ ಅನಿಲ ಸೋರಿಕೆ; ಕನಿಷ್ಠ 10 ಮಂದಿ ಸಾವು

Update: 2019-05-26 17:09 GMT

ಬೀಜಿಂಗ್, ಮೇ 26: ಪೂರ್ವ ಚೀನಾದ ವೈಹೈ ನಗರದ ಲೊಂಗ್ಯಾನ್ ಬಂದರಿನಲ್ಲಿ ಲಂಗರುಹಾಕಿದ್ದ ಸರಕುಸಾಗಣೆ ಹಡಗೊಂದರ ಅಗ್ನಿನಿರೋಧಕ ವ್ಯವಸ್ಥೆಯಿಂದ ಇಂಗಾಲದ ಡೈಆಕ್ಸೈಡ್ ಅನಿಲ ಸೋರಿಕೆಯಾದ ಪರಿಣಾಮವಾಗಿ ಕನಿಷ್ಠ 10 ಮಂದಿ ಮೃತಪಟ್ಟು, ಇತರ 19 ಮಂದಿ ಗಾಯಗೊಂಡಿದ್ದಾರೆ.

 ಶನಿವಾರ ಸಂಜೆ 4:00 ಗಂಟೆಯ ವೇಳೆಗೆ ಈ ಅಗ್ನಿ ಅನಾಹುತ ಸಂಭವಿಸಿದೆ. ನತದೃಷ್ಟ ಹಡಗು ಫ್ಯೂಜಿಯಾನ್ ಶಿಪ್ಪಿಂಗ್ ಕಂಪೆನಿಗೆ ಸೇರಿದ್ದೆಂದು ತಿಳಿದುಬಂದಿದೆ.

ಹಡಗಿನ ಸಿಬ್ಬಂದಿಯಂದ ಅಗ್ನಿನಿರೋಧಕ ವ್ಯವಸ್ಥೆಯ ಕಳಪೆ ನಿರ್ವಹಣೆಯೇ ಅನಿಲ ಸೋರಿಕೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಹಡಗಿನ ಕೆಲವು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News