ಗರ್ಭಪಾತದ ವಿರುದ್ಧ ಪೋಪ್ ಆಕ್ರೋಶ

Update: 2019-05-26 17:11 GMT

 ವ್ಯಾಟಿಕನ್, ಮೇ 26: ಗರ್ಭಪಾತವು ಅಸ್ವೀಕಾರಾರ್ಹವೆಂದು ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಶನಿವಾರ ಪುನರುಚ್ಚರಿಸಿದ್ದಾರೆ. ಗರ್ಭಪಾತ ಮಾಡುವುದೆಂದರೆ ‘ಬಾಡಿಗೆಯ ಹಂತಕ’ನನ್ನು ಗೊತ್ತುಪಡಿಸುವುದಕ್ಕೆ ಸಮಾನವಾದುದು ಎಂದವರು ಹೇಳಿದ್ದಾರೆ.

  ಒಂದು ಸಮಸ್ಯೆಯನ್ನು ಪರಿಹರಿಸಬೇಕೆಂದರೆ, ಒಂದು ಮಾನವ ಜೀವವನ್ನೇ ಬಲಿಕೊಡುವುದು ಹೇಗೆ ನ್ಯಾಯಸಮ್ಮತವೆನಿಸುತ್ತದೆ?. ಸಮಸ್ಯೆಯನ್ನು ಬಗೆಹರಿಸಲು ಬಾಡಿಗೆಯ ಹಂತಕನನ್ನು ಗೊತ್ತುಪಡಿಸುವುದು ಕಾನೂನು ಸಮ್ಮತವೇ? ಎಂದು ಫ್ರಾನ್ಸಿಸ್ ಪ್ರಶ್ನಿಸಿದ್ದಾರೆ.

‘ಗರ್ಭದಲ್ಲಿರುವ ಶಿಶುವು ಗಂಭೀರ ಕಾಯಿಲೆಗೆ ತುತ್ತಾಗಿರುವಾಗ ಗರ್ಭಪಾತ ವಿಧಾನದ ಬಳಕೆ’ ಎಂಬ ವಿಷಯದ ಕುರಿತು ವ್ಯಾಟಿಕನ್‌ನಲ್ಲಿ ನಡೆದ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.

‘‘ಪ್ರತಿಯೊಂದು ಶಿಶು ಕೂಡಾ, ಕುಟುಂಬದ ಇತಿಹಾಸವನ್ನು ಬದಲಾಯಿಸುವಂತಹ ಕೊಡುಗೆಯಾಗಿದೆ. ಆ ಮಗುವನ್ನು ಸ್ವಾಗತಿಸುವ, ಪ್ರೀತಿಸುವ,ಪಾಲಿಸುವ ಅಗತ್ಯವಿದೆ’’ ಎಂದವರು ಹೇಳಿದರು.

 ಗರ್ಭದಲ್ಲಿರುವ ಶಿಶುವು ಜನಿಸಿದ ಬಳಿ ತುಂಬಾ ಸಮಯ ಬದುಕಲಾರದಂತಹ ಪ್ರಕರಣಗಳಲ್ಲಿಯೂ, ಅದರ ವೈದ್ಯಕೀಯ ಶುಶ್ರೂಷೆ ನಡೆಸುವುದು ವ್ಯರ್ಥವೆನಿಸಲಾರದು. ಬದಲಿಗೆ ಮಗುವಿನ ಸಾವಿನ ಆಘಾತವನ್ನು ಎದುರಿಸುವುದಕ್ಕೆ ಪಾಲಕರನ್ನು ಅದು ಸಿದ್ಧಗೊಳಿಸುತ್ತದೆ. ಆ ಮಗುವು ಮೃತಪಟ್ಟರೂ,ಅದರ ನೆನಪು ಅವರ ಬಾಳಿ ನಲ್ಲಿ ಸದಾ ಉಳಿದುಕೊಂಡಿರುತ್ತದೆ’’ ಎಂದು ಪೋಪ್ ಭಾವುಕರಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News