‘ಅಮೆರಿಕಾಸ್ ಗಾಟ್ ಟ್ಯಾಲೆಂಟ್‍’ನಲ್ಲಿ ಮಿಂಚಿದ ಭಾರತದ ಸ್ಲಂ ನಿವಾಸಿಗಳ ನೃತ್ಯ ತಂಡ

Update: 2019-05-26 17:46 GMT

ಪ್ರಸಿದ್ಧ ರಿಯಾಲಿಟಿ ಶೋ ‘ಅಮೆರಿಕಾಸ್ ಗಾಟ್ ಟ್ಯಾಲೆಂಟ್’ ಮತ್ತೆ ಈ ತಿಂಗಳ 28ರಿಂದ ಎನ್‍ ಬಿಸಿಗೆ ಮರಳಲು ಸಜ್ಜಾಗಿದೆ. ಪ್ರಿಮಿಯರ್ ಶೋಗೆ ಮುನ್ನವೇ ನಿರ್ಮಾಪಕರು ಮುಂಬೈಯ ಸ್ಲಂ ಒಂದರ ನೃತ್ಯ ತಂಡ ‘ವಿ ಅನ್‍ ಬೀಟೇಬಲ್’ನ ಪ್ರದರ್ಶನದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ವಿ ಅನ್‍ ಬೀಟೇಬಲ್’ನ ಮೊದಲ ಸುತ್ತಿನ ನೃತ್ಯ ಪ್ರದರ್ಶನಕ್ಕೆ ಎಲ್ಲ ನಾಲ್ವರು ತೀರ್ಪುಗಾರರಾದ ಗೇಬ್ರಿಯಲ್ ಯೂನಿಯನ್, ಹೊವಿ ಮಾಂಡೆಲ್, ಜುಲಿಯನ್ ಹಗ್ ಮತ್ತು ಸೈಮನ್ ಕೋವೆಲ್ ಎದ್ದು ನಿಂತು ಗೌರವ ಸೂಚಿಸಿದ್ದು, ಇದರ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

'ಅಮೆರಿಕಾಸ್ ಗಾಟ್ ಟ್ಯಾಲೆಂಟ್’ ವಿ ಅನ್‍ ಬೀಟೇಬಲ್ಸ್‍ ನ ವಿಡಿಯೊವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, "ಇವರ ಹೆಸರು ವಿ ಅನ್‍ ಬೀಟೇಬಲ್ಸ್ ಎಂದಿರುವುದರ ಹಿಂದೆ ಒಂದು ಕಾರಣವಿದೆ!” ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಿದೆ.

ಯೂ ಟ್ಯೂಬ್‍ನಲ್ಲಿ ‘ಅಮೆರಿಕಾಸ್ ಗಾಟ್ ಟ್ಯಾಲೆಂಟ್’ ಶೋ ವೀಕ್ಷಿಸಿದ ವಿ ಅನ್‍ಬೀಟೇಬಲ್ ಅದರಲ್ಲಿ ಭಾಗವಹಿಸುವ ಕನಸು ಕಂಡಿತ್ತು. ಇದೀಗ ಆ ಕನಸು ನನಸಾಗಿದೆ.  ಇದು ಮುಂಬೈನ ಸ್ಲಂನಲ್ಲಿ ವಾಸವಾಗಿರುವ ಯುವಕ/ಯುವತಿಯರ ತಂಡವು ತಮ್ಮ ಆರ್ಥಿಕ ಸಮಸ್ಯೆಯ ಬಗ್ಗೆಯೂ ಕಾರ್ಯಕ್ರಮದಲ್ಲಿ ಹೇಳಿಕೊಂಡಿದೆ. ತಂಡವು ಬಾಜಿರಾವ್ ಮಸ್ತಾನಿಯ ಮಲ್ಹರಿ ನೃತ್ಯವನ್ನು ಪ್ರದರ್ಶಿಸಿದ್ದು, ಇವರ ಅಪೂರ್ವ ಪ್ರದರ್ಶನಕ್ಕೆ ತೀರ್ಪುಗಾರರು ತಲೆದೂಗಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News