ಸಂಪೂರ್ಣ ಬಿಳಿಬಣ್ಣದ ಪಂಡಾ ಪತ್ತೆ

Update: 2019-05-26 17:53 GMT

ಬೀಜಿಂಗ್, ಮೇ 26: ನೈಋತ್ಯ ಚೀನಾದ ವನ್ಯಧಾಮವೊಂದರಲ್ಲಿ ಅಪೂರ್ವವಾದ ಅಪ್ಪಟ ಬಿಳಿಬಣ್ಣದ ಪಂಡಾ ಪ್ರಾಣಿಯೊಂದು ಪತ್ತೆಯಾಗಿದೆ.

ಕೆಂಪುಬಣ್ಣದ ಕಣ್ಣುಗಳಿರುವ, ಸಂಪೂರ್ಣ ಬಿಳಿಬಣ್ಣದ ಈ ಪಂಡಾವನ್ನು ಎಪ್ರಿಲ್ ತಿಂಗಳ ಮಧ್ಯದಲ್ಲಿ ಸಿಚುವಾನ್ ಪ್ರಾಂತದ ವನ್ಯಧಾಮದಲ್ಲಿ ಚಾರಣಿಗರು ಪತ್ತೆಹಚ್ಚಿದ್ದರು ಎಂದು ಚೀನಾದ ಅಧಿಕೃತ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ಸಾಮಾನ್ಯವಾಗಿ ಪಂಡಾಗಳ ಹೊಟ್ಟೆ ಮತ್ತು ಹಣೆ ಮತ್ತು ಕತ್ತಿನ ಭಾಗದಲ್ಲಿ ಬಿಳಿಬಣ್ಣವನ್ನು ಹೊಂದಿದ್ದು, ಅದರ ದೇಹದ ಉಳಿದ ಭಾಗಗಳು ಸಂಪೂರ್ಣ ಕಪ್ಪಾಗಿವೆ. ಆದರೆ ಸಂಪೂರ್ಣ ಬಿಳಿಯ ಬಣ್ಣ ಪಂಡಾ ಕಾಣಸಿಕ್ಕಿರುವುದು ತೀರಾ ಅಪರೂಪವೆಂದು ಕ್ಸಿನುವಾ ತಿಳಿಸಿದೆ.

1ರಿಂದ 2 ವರ್ಷಗಳ ನಡುವಿನ ವಯಸ್ಸಿನ ಈ ಪಂಡಾದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲವೆಂದು ಪೀಕಿಂಗ್ ವಿವಿಯ ಕರಡಿಗಳ ಅಧ್ಯಯನ ವಿಭಾಗದ ಸಂಶೋಧಕ ಲೇ ಶೆಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News