ಭಾರತಕ್ಕೆ ಚೊಚ್ಚಲ ವಿಶ್ವಕಪ್ ಕಿರೀಟ ಗೆದ್ದು ಕೊಟ್ಟ ಕಪಿಲ್ ದೇವ್

Update: 2019-05-27 18:36 GMT

ಲಂಡನ್, ಮೇ 27: ಸತತ ಎರಡು ಬಾರಿ ವಿಶ್ವಕಪ್ ಎತ್ತಿದ್ದ ವೆಸ್ಟ್ ಇಂಡೀಸ್‌ಗೆ 3ನೇ ಬಾರಿ ವಿಶ್ವಕಪ್ ಸಿಗಲಿಲ್ಲ. ಭಾರತಕ್ಕೆ ಮೊದಲ ಬಾರಿ ವಿಶ್ವಕಪ್ ಒಲಿದಿರುವುದು ಇಂದಿಗೆ ಇತಿಹಾಸವಾಗಿದೆ.

 1983ರಲ್ಲಿ ಕಪಿಲ್‌ದೇವ್ ನಾಯಕತ್ವದ ಭಾರತದ ಕ್ರಿಕೆಟ್ ತಂಡ ಲಂಡನ್‌ಗೆ ವಿಮಾನ ಹತ್ತುವಾಗ ಭಾರತದ ತಂಡ ವಿಶ್ವಕಪ್ ಎತ್ತುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ನಾಯಕ ಕಪಿಲ್ ದೇವ್ ಅವರು ಆಲ್‌ರೌಂಡರ್ ಪ್ರದರ್ಶನದ ಮೂಲಕ ಭಾರತಕ್ಕೆ ಪ್ರಶಸ್ತಿ ತಂದುಕೊಡಲು ಶ್ರಮಿಸಿದ್ದರು.

 ಕಪಿಲ್ ದೇವ್ ಆಡಿರುವ 8 ಪಂದ್ಯಗಳಲ್ಲಿ ಉತ್ತಮ ಕೊಡುಗೆ ನೀಡಿದರು. ಯಾವುದೇ ಪಂದ್ಯದಲ್ಲಿ ಅವರು ವೈಫಲ್ಯ ಅನುಭವಿಸಲಿಲ್ಲ. ಟೂರ್ನಮೆಂಟ್‌ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದ ಕಪಿಲ್ ದೇವ್ ಅವರು 8 ಇನಿಂಗ್ಸ್‌ಗಳಲ್ಲಿ 60.6 ಸರಾಸರಿಯಂತೆ 303 ರನ್ ಗಳಿಸಿದ್ದರು. ಝಿಂಬಾಬ್ವೆ ವಿರುದ್ಧ ಅವರು ದಾಖಲಿಸಿದ್ದ 175 ರನ್(138ಎಸೆತ) ದಾಖಲೆಯಾಗಿದೆ. ಭಾರತ 9ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕಪಿಲ್ ದೇವ್ ಕ್ರೀಸ್‌ಗೆ ಆಗಮಿಸಿದ್ದರು. ಅವರು ಕ್ರೀಸ್‌ನಲ್ಲಿದ್ದಾಗ 17ಕ್ಕೆ 5ನೇ ವಿಕೆಟ್ ಉರುಳಿತು. ರೋಜರ್ ಬಿನ್ನಿ ಜೊತೆ 6ನೇ ವಿಕೆಟ್‌ಗೆ ಕಪಿಲ್ ದೇವ್ 60ರನ್‌ಗಳ ಜೊತೆಯಾಟ ನೀಡಿದರು. 8ನೇ ವಿಕೆಟ್‌ಗೆ ಜೊತೆಯಾಟದಲ್ಲಿ ಮದನ್‌ಲಾಲ್ 62ರನ್‌ಗಳನ್ನು ಜಮೆ ಮಾಡಿದರು. ಮದನ್‌ಲಾಲ್ 17 ರನ್ ಗಳಿಸಿದರು. 140 ರನ್ ತಲುಪುವಾಗ ಭಾರತದ 8 ವಿಕೆಟ್‌ಗಳು ಉರುಳಿತ್ತು. 9ನೇ ವಿಕೆಟ್‌ಗೆ ಕಪಿಲ್ ದೇವ್ ಮತ್ತು ಸೈಯದ್ ಕಿರ್ಮಾನಿ 126 ರನ್‌ಗಳ ಕೊಡುಗೆ ನೀಡಿದರು. ಇದರಲ್ಲಿ ಕಿರ್ಮಾನಿ ಕೊಡುಗೆ 24ರನ್. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 9ನೇ ವಿಕೆಟ್‌ಗೆ ಗರಿಷ್ಠ ರನ್‌ಗಳ ಜೊತೆಯಾಟವಾಗಿದೆ. ಭಾರತ 60 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 266 ರನ್ ಗಳಿಸಿತ್ತು.

  ಕಪಿಲ್ ದೇವ್ 6 ಸಿಕ್ಸರ್ ಸಿಡಿಸಿದ್ದರು. 49ನೇ ಓವರ್‌ನಲ್ಲಿ ಶತಕ ಸಿಡಿಸಿದ ಕಪಿಲ ದೇವ್ ಮುಂದೆ 11 ಓವರ್‌ಗಳಲ್ಲಿ 75 ರನ್ ಗಳಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಫೈನಲ್‌ನಲ್ಲಿ ಕಪಿಲ್ ದೇವ್ ಕೊಡುಗೆ ದೊಡ್ಡದು. ಕಪಿಲ್ ದೇವ್ ಅವರು ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲೂ ಮಿಂಚಿದರು. ಕ್ಲೈವ್ ಲಾಯ್ಡಿ ಮತ್ತು ವಿವಿಯನ್ ರಿಚರ್ಡ್ಸ್ ಅವರ ಕ್ಯಾಚ್ ಪಡೆದು ವಿಂಡೀಸ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು. 52 ಓವರ್‌ಗಳಲ್ಲಿ 140ಕ್ಕೆ ಆಲೌಟಾಗಿದ್ದ ವಿಂಡೀಸ್ ಹ್ಯಾಟ್ರಿಕ್ ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿತು. ಇದರೊಂದಿಗೆ ಮೊದಲು ಬ್ಯಾಟಿಂಗ್ ನಡೆಸಿದ್ದ ತಂಡ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.

1987: ಮೆಕ್‌ಡರ್ಮೆಟ್

 1987ರಲ್ಲಿ ಭಾರತ ಮತ್ತು ಪಾಕಿಸ್ತಾನದ ಜಂಟಿ ಆತಿಥ್ಯದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಆಸ್ಟ್ರೇಲಿಯ ಪ್ರಶಸ್ತಿ ಜಯಿಸಿತ್ತು. ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದವು.

 ಕ್ರಿಗೆ ಮೆಕ್‌ಡರ್ಮೆಟ್ 8 ಪಂದ್ಯಗಳಲ್ಲಿ 18 ವಿಕೆಟ್ ಪಡೆದು ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಚೆನ್ನೈನಲ್ಲಿ ಭಾರತದ ವಿರುದ್ಧ 10 ಓವರ್‌ಗಳಲ್ಲಿ 56ಕ್ಕೆ 4 ವಿಕೆಟ್ ಪಡೆದು ಗೆಲುವಿನ ರೂವಾರಿ ಎನಿಸಿಕೊಂಡರು. 271 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಭಾರತ ಒಂದು ಹಂತದಲ್ಲಿ 2 ವಿಕೆಟ್ ನಷ್ಟದಲ್ಲಿ 207 ರನ್ ಗಳಿಸಿತ್ತು. ತಂಡದ ಸ್ಕೋರ್ 269 ತಲುಪುವಾಗ ಆಲೌಟಾಯಿತು. ಕೇವಲ 1 ರನ್ ಅಂತರದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯ ಗೆಲುವು ದಾಖಲಿಸಿತ್ತು.

 ಲಾಹೋರ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಆಸ್ಟ್ರೇಲಿಯ ಆಘಾತ ನೀಡಿತು. ಈ ಪಂದ್ಯದಲ್ಲಿ ಮೆಕ್‌ಡರ್ಮೆಟ್ 5 ವಿಕೆಟ್ ಪಡೆದರು. 75 ರನ್ ಗಳಿಸಿದ ಆಸ್ಟ್ರೇಲಿಯ ಆರಂಭಿಕ ದಾಂಡಿಗ ಡೇವಿಡ್ ಬೂನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

1992: ಮಾರ್ಟಿನ್ ಕ್ರೋವ್

ಆಸ್ಟ್ರೇಲಿಯದಲ್ಲಿ 1992ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಪ್ರಶಸ್ತಿ ಜಯಿಸಿತ್ತು. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು 22 ರನ್‌ಗಳ ಅಂತರದಲ್ಲಿ ಮಣಿಸಿದ ಪಾಕಿಸ್ತಾನ ಮೊದಲ ಬಾರಿ ಪ್ರಶಸ್ತಿ ಜಯಿಸಿತ್ತು. ಪಂದ್ಯಶ್ರೇಷ್ಠ ಪ್ರಶಸ್ತಿ ಇಮ್ರಾನ್ ಖಾನ್‌ಗೆ ದೊರೆಯಿತು. ನ್ಯೂಝಿಲ್ಯಾಂಡ್ ತಂಡ ಸೆಮಿಫೈನಲ್‌ಗೆ ತಲುಪುವಲ್ಲಿ ಮಾರ್ಟಿನ್ ಕ್ರೋವ್ 9 ಇನಿಂಗ್ಸ್‌ಗಳಲ್ಲಿ 456 ರನ್ ಗಳಿಸಿದ್ದರು. ಅವರಿಗೆ ಪ್ಲೇಯರ್ ಆಫ್ ಟೂರ್ನಮೆಂಟ್ ಪ್ರಶಸ್ತಿ ದೊರೆಯಿತು. ಮೊದಲ ಪಂದ್ಯದಲ್ಲಿ ಕ್ರೋವ್ ಆಕ್ಲೆಂಡ್‌ನಲ್ಲಿ 134 ಎಸೆತಗಳಲ್ಲಿ ಔಟಾಗದೆ 100 ರನ್ ಗಳಿಸಿದರು. ನ್ಯೂಝಿಲ್ಯಾಂಡ್ 37 ರನ್‌ಗಳ ಜಯ ದಾಖಲಿಸಿತು. ಝಿಂಬಾಬ್ವೆ ವಿರುದ್ಧ ಕ್ರೋವ್ ಮ್ಯಾಚ್ ವಿನ್ನಿಂಗ್ 74 ರನ್(43 ಎಸೆತಗಳಲ್ಲಿ) ಗಳಿಸಿದ್ದರು. ಮೊದಲ ಬಾರಿ ವಿಶ್ವಕಪ್ ಪ್ಲೇಯರ್ ಆಫ್ ಟೂರ್ನಮೆಂಟ್ ಆರಂಭಗೊಂಡಿತ್ತು. ಲಂಡನ್, ಮೇ 27: ಸತತ ಎರಡು ಬಾರಿ ವಿಶ್ವಕಪ್ ಎತ್ತಿದ್ದ ವೆಸ್ಟ್ ಇಂಡೀಸ್‌ಗೆ 3ನೇ ಬಾರಿ ವಿಶ್ವಕಪ್ ಸಿಗಲಿಲ್ಲ. ಭಾರತಕ್ಕೆ ಮೊದಲ ಬಾರಿ ವಿಶ್ವಕಪ್ ಒಲಿದಿರುವುದು ಇಂದಿಗೆ ಇತಿಹಾಸವಾಗಿದೆ.

  1983ರಲ್ಲಿ ಕಪಿಲ್‌ದೇವ್ ನಾಯಕತ್ವದ ಭಾರತದ ಕ್ರಿಕೆಟ್ ತಂಡ ಲಂಡನ್‌ಗೆ ವಿಮಾನ ಹತ್ತುವಾಗ ಭಾರತದ ತಂಡ ವಿಶ್ವಕಪ್ ಎತ್ತುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ನಾಯಕ ಕಪಿಲ್ ದೇವ್ ಅವರು ಆಲ್‌ರೌಂಡರ್ ಪ್ರದರ್ಶನದ ಮೂಲಕ ಭಾರತಕ್ಕೆ ಪ್ರಶಸ್ತಿ ತಂದುಕೊಡಲು ಶ್ರಮಿಸಿದ್ದರು.

  ಕಪಿಲ್ ದೇವ್ ಆಡಿರುವ 8 ಪಂದ್ಯಗಳಲ್ಲಿ ಉತ್ತಮ ಕೊಡುಗೆ ನೀಡಿದರು. ಯಾವುದೇ ಪಂದ್ಯದಲ್ಲಿ ಅವರು ವೈಫಲ್ಯ ಅನುಭವಿಸಲಿಲ್ಲ. ಟೂರ್ನಮೆಂಟ್‌ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದ ಕಪಿಲ್ ದೇವ್ ಅವರು 8 ಇನಿಂಗ್ಸ್‌ಗಳಲ್ಲಿ 60.6 ಸರಾಸರಿಯಂತೆ 303 ರನ್ ಗಳಿಸಿದ್ದರು. ಝಿಂಬಾಬ್ವೆ ವಿರುದ್ಧ ಅವರು ದಾಖಲಿಸಿದ್ದ 175 ರನ್(138ಎಸೆತ) ದಾಖಲೆಯಾಗಿದೆ. ಭಾರತ 9ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕಪಿಲ್ ದೇವ್ ಕ್ರೀಸ್‌ಗೆ ಆಗಮಿಸಿದ್ದರು. ಅವರು ಕ್ರೀಸ್‌ನಲ್ಲಿದ್ದಾಗ 17ಕ್ಕೆ 5ನೇ ವಿಕೆಟ್ ಉರುಳಿತು. ರೋಜರ್ ಬಿನ್ನಿ ಜೊತೆ 6ನೇ ವಿಕೆಟ್‌ಗೆ ಕಪಿಲ್ ದೇವ್ 60ರನ್‌ಗಳ ಜೊತೆಯಾಟ ನೀಡಿದರು. 8ನೇ ವಿಕೆಟ್‌ಗೆ ಜೊತೆಯಾಟದಲ್ಲಿ ಮದನ್‌ಲಾಲ್ 62ರನ್‌ಗಳನ್ನು ಜಮೆ ಮಾಡಿದರು. ಮದನ್‌ಲಾಲ್ 17 ರನ್ ಗಳಿಸಿದರು. 140 ರನ್ ತಲುಪುವಾಗ ಭಾರತದ 8 ವಿಕೆಟ್‌ಗಳು ಉರುಳಿತ್ತು. 9ನೇ ವಿಕೆಟ್‌ಗೆ ಕಪಿಲ್ ದೇವ್ ಮತ್ತು ಸೈಯದ್ ಕಿರ್ಮಾನಿ 126 ರನ್‌ಗಳ ಕೊಡುಗೆ ನೀಡಿದರು. ಇದರಲ್ಲಿ ಕಿರ್ಮಾನಿ ಕೊಡುಗೆ 24ರನ್. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 9ನೇ ವಿಕೆಟ್‌ಗೆ ಗರಿಷ್ಠ ರನ್‌ಗಳ ಜೊತೆಯಾಟವಾಗಿದೆ. ಭಾರತ 60 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 266 ರನ್ ಗಳಿಸಿತ್ತು.

  ಕಪಿಲ್ ದೇವ್ 6 ಸಿಕ್ಸರ್ ಸಿಡಿಸಿದ್ದರು. 49ನೇ ಓವರ್‌ನಲ್ಲಿ ಶತಕ ಸಿಡಿಸಿದ ಕಪಿಲ ದೇವ್ ಮುಂದೆ 11 ಓವರ್‌ಗಳಲ್ಲಿ 75 ರನ್ ಗಳಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಫೈನಲ್‌ನಲ್ಲಿ ಕಪಿಲ್ ದೇವ್ ಕೊಡುಗೆ ದೊಡ್ಡದು. ಕಪಿಲ್ ದೇವ್ ಅವರು ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲೂ ಮಿಂಚಿದರು. ಕ್ಲೈವ್ ಲಾಯ್ಡಿ ಮತ್ತು ವಿವಿಯನ್ ರಿಚರ್ಡ್ಸ್ ಅವರ ಕ್ಯಾಚ್ ಪಡೆದು ವಿಂಡೀಸ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು. 52 ಓವರ್‌ಗಳಲ್ಲಿ 140ಕ್ಕೆ ಆಲೌಟಾಗಿದ್ದ ವಿಂಡೀಸ್ ಹ್ಯಾಟ್ರಿಕ್ ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿತು. ಇದರೊಂದಿಗೆ ಮೊದಲು ಬ್ಯಾಟಿಂಗ್ ನಡೆಸಿದ್ದ ತಂಡ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.

1987: ಮೆಕ್‌ಡರ್ಮೆಟ್

 1987ರಲ್ಲಿ ಭಾರತ ಮತ್ತು ಪಾಕಿಸ್ತಾನದ ಜಂಟಿ ಆತಿಥ್ಯದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಆಸ್ಟ್ರೇಲಿಯ ಪ್ರಶಸ್ತಿ ಜಯಿಸಿತ್ತು. ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದವು.

 ಕ್ರಿಗೆ ಮೆಕ್‌ಡರ್ಮೆಟ್ 8 ಪಂದ್ಯಗಳಲ್ಲಿ 18 ವಿಕೆಟ್ ಪಡೆದು ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಚೆನ್ನೈನಲ್ಲಿ ಭಾರತದ ವಿರುದ್ಧ 10 ಓವರ್‌ಗಳಲ್ಲಿ 56ಕ್ಕೆ 4 ವಿಕೆಟ್ ಪಡೆದು ಗೆಲುವಿನ ರೂವಾರಿ ಎನಿಸಿಕೊಂಡರು. 271 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಭಾರತ ಒಂದು ಹಂತದಲ್ಲಿ 2 ವಿಕೆಟ್ ನಷ್ಟದಲ್ಲಿ 207 ರನ್ ಗಳಿಸಿತ್ತು. ತಂಡದ ಸ್ಕೋರ್ 269 ತಲುಪುವಾಗ ಆಲೌಟಾಯಿತು. ಕೇವಲ 1 ರನ್ ಅಂತರದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯ ಗೆಲುವು ದಾಖಲಿಸಿತ್ತು.

 ಲಾಹೋರ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಆಸ್ಟ್ರೇಲಿಯ ಆಘಾತ ನೀಡಿತು. ಈ ಪಂದ್ಯದಲ್ಲಿ ಮೆಕ್‌ಡರ್ಮೆಟ್ 5 ವಿಕೆಟ್ ಪಡೆದರು. 75 ರನ್ ಗಳಿಸಿದ ಆಸ್ಟ್ರೇಲಿಯ ಆರಂಭಿಕ ದಾಂಡಿಗ ಡೇವಿಡ್ ಬೂನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

1992: ಮಾರ್ಟಿನ್ ಕ್ರೋವ್

ಆಸ್ಟ್ರೇಲಿಯದಲ್ಲಿ 1992ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಪ್ರಶಸ್ತಿ ಜಯಿಸಿತ್ತು. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು 22 ರನ್‌ಗಳ ಅಂತರದಲ್ಲಿ ಮಣಿಸಿದ ಪಾಕಿಸ್ತಾನ ಮೊದಲ ಬಾರಿ ಪ್ರಶಸ್ತಿ ಜಯಿಸಿತ್ತು. ಪಂದ್ಯಶ್ರೇಷ್ಠ ಪ್ರಶಸ್ತಿ ಇಮ್ರಾನ್ ಖಾನ್‌ಗೆ ದೊರೆಯಿತು. ನ್ಯೂಝಿಲ್ಯಾಂಡ್ ತಂಡ ಸೆಮಿಫೈನಲ್‌ಗೆ ತಲುಪುವಲ್ಲಿ ಮಾರ್ಟಿನ್ ಕ್ರೋವ್ 9 ಇನಿಂಗ್ಸ್‌ಗಳಲ್ಲಿ 456 ರನ್ ಗಳಿಸಿದ್ದರು. ಅವರಿಗೆ ಪ್ಲೇಯರ್ ಆಫ್ ಟೂರ್ನಮೆಂಟ್ ಪ್ರಶಸ್ತಿ ದೊರೆಯಿತು. ಮೊದಲ ಪಂದ್ಯದಲ್ಲಿ ಕ್ರೋವ್ ಆಕ್ಲೆಂಡ್‌ನಲ್ಲಿ 134 ಎಸೆತಗಳಲ್ಲಿ ಔಟಾಗದೆ 100 ರನ್ ಗಳಿಸಿದರು. ನ್ಯೂಝಿಲ್ಯಾಂಡ್ 37 ರನ್‌ಗಳ ಜಯ ದಾಖಲಿಸಿತು. ಝಿಂಬಾಬ್ವೆ ವಿರುದ್ಧ ಕ್ರೋವ್ ಮ್ಯಾಚ್ ವಿನ್ನಿಂಗ್ 74 ರನ್(43 ಎಸೆತಗಳಲ್ಲಿ) ಗಳಿಸಿದ್ದರು. ಮೊದಲ ಬಾರಿ ವಿಶ್ವಕಪ್ ಪ್ಲೇಯರ್ ಆಫ್ ಟೂರ್ನಮೆಂಟ್ ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News