ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುಗಡೆಗೆ ಕಾವೇರಿ ಪ್ರಾಧಿಕಾರ ಆದೇಶ
Update: 2019-05-28 14:38 IST
ಹೊಸದಿಲ್ಲಿ, ಮೇ 28: ತಮಿಳುನಾಡಿಗೆ 9.19 ಟಿಎಂಸಿ ಕಾವೇರಿ ನೀಡುವಂತೆ ಕರ್ನಾಟಕಕ್ಕೆ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.
ದಿಲ್ಲಿಯ ಜಲಮಂಡಳಿ ಕಚೇರಿಯಲ್ಲಿ ಇಂದು ನಡೆದ ಪ್ರಾಧಿಕಾರದ 3ನೇ ಸಭೆಯಲ್ಲಿ ಎರಡೂ ರಾಜ್ಯಗಳ ವಾದವನ್ನು ಪರಿಶೀಲಿಸಿ ಈ ಆದೇಶ ನೀಡಿದೆ.
ತಮಿಳುನಾಡು ಸರಕಾರವು 9.25 ಟಿಎಂಸಿ ನೀರು ಬಿಡುವಂತೆ ಜೂನ್ ತಿಂಗಳಲ್ಲೇ ಒತ್ತಾಯಿಸಿತ್ತು. ಈ ಬಗ್ಗೆ ಎರಡು ವಾರಗಳ ಕಾಲ ನಡೆದ ಸಭೆಯಲ್ಲಿ ಎರಡೂ ರಾಜ್ಯಗಳ ವಾದವನ್ನು ಆಲಿಸಿದ ಪ್ರಾಧಿಕಾರ ಈ ತೀರ್ಪು ನೀಡಿದೆ.