×
Ad

ಸಚಿವರ ಕುಟುಂಬ ಸದಸ್ಯರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Update: 2019-05-28 21:52 IST

ಬರ್ದ್ವಾನ್, ಮೇ 28: ಪಶ್ಚಿಮಬಂಗಾಳದ ಸಚಿವ ಮಲಯ್ ಘಾಟಕ್ ಅವರ ಕುಟುಂಬದ ಸದಸ್ಯರಾದ ಓರ್ವ ಮಹಿಳೆ ಹಾಗೂ ಆಕೆಯ ಪುತ್ರಿಯ ಕೊಳೆತ ಮೃತದೇಹ ಪಶ್ಚಿಮಬಂಗಾಳದ ಅಸನ್ಸೋಲ್‌ನಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿದೆ.

 ಅಸನ್ಸೋಲ್ ಪಟ್ಟಣದ ಹಿಂದೂಸ್ತಾನ್ ಪಾರ್ಕ್ ಪ್ರದೇಶದಲ್ಲಿರುವ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಈ ಕೊಳೆತ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮನೆ ಪ್ರವೇಶಿಸಿದಾಗ ಅಲ್ಲಿ ಇಬ್ಬರು ಮಹಿಳೆಯರ ಮೃತದೇಹಗಳು ಪತ್ತೆಯಾಗಿವೆ.

ಮೃತಪಟ್ಟವರನ್ನು ಜಯಶ್ರೀ ಘಾಟಕ್ ಹಾಗೂ ಅವರ ಪುತ್ರಿ ನೀಲಮ್ ಘಾಟಕ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News