ಇರಾನ್ ಜೊತೆ ಹೊಸ ಪರಮಾಣು ಒಪ್ಪಂದ ಸಾಧ್ಯ: ಟ್ರಂಪ್

Update: 2019-05-28 17:35 GMT

ಟೋಕಿಯೊ, ಮೇ 28: ಇರಾನ್‌ನ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಅದರ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲಾಗಿರುವ ಹಿನ್ನೆಲೆಯಲ್ಲಿ, ಆ ದೇಶದೊಂದಿಗೆ ಹೊಸ ಪರಮಾಣು ಒಪ್ಪಂದ ಸಾಧ್ಯವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

 ‘‘ಒಪ್ಪಂದವೊಂದನ್ನು ಮಾಡಿಕೊಳ್ಳಲು ಇರಾನ್ ಬಯಸುತ್ತದೆ ಎಂಬ ನಂಬಿಕೆ ನನಗಿದೆ. ಹಾಗೆ ಮಾಡಿದರೆ ಅವರು ಬುದ್ಧಿವಂತರು. ಇದು ಸಾಧ್ಯವಾಗಲಿದೆ ಎಂದು ನನಗನಿಸುತ್ತದೆ’’ ಎಂದು ಟೋಕಿಯೊದಲ್ಲಿ ಜಪಾನ್ ಪ್ರಧಾನಿ ಶಿಂಝೊ ಅಬೆ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

‘‘ಈಗಿನ ನಾಯಕತ್ವದಲ್ಲೇ ಶ್ರೇಷ್ಠ ದೇಶವಾಗುವ ಅವಕಾಶ ಆ ದೇಶಕ್ಕಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News