ಜಪಾನ್: ಚೂರಿ ದಾಳಿಗೆ ಇಬ್ಬರು ಬಲಿ

Update: 2019-05-28 17:45 GMT

ಟೋಕಿಯೊ (ಜಪಾನ್), ಮೇ 28: ಜಪಾನ್ ರಾಜಧಾನಿ ಟೋಕಿಯೊದ ಹೊರವಲಯದಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ನಡೆಸಿದ ಚೂರಿ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಹಲವು ಮಕ್ಕಳು ಸೇರಿದಂತೆ 17 ಮಂದಿ ಗಾಯಗೊಂಡಿದ್ದಾರೆ.

ಟೋಕಿಯೊದ ದಕ್ಷಿಣಕ್ಕಿರುವ ಕವಾಸಕಿ ಪಟ್ಟಣದಲ್ಲಿ ಈ ದಾಳಿ ನಡೆದಿದ್ದು, ಹಂತಕನು ಬಳಿಕ ತನಗೆ ತಾನೇ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಾಳಿಯಲ್ಲಿ 12 ವರ್ಷದ ಶಾಲಾ ಬಾಲಕಿ ಮತ್ತು 39 ವರ್ಷದ ಓರ್ವ ಪುರುಷ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯೊಂದರ ಅಧಿಕಾರಿಯೊಬ್ಬರು ತಿಳಿಸಿದರು.

ಶಾಲಾ ಮಕ್ಕಳು ಬಸ್ ಕಾಯುತ್ತಿದ್ದಾಗ ಬಸ್ ನಿಲ್ದಾಣವೊಂದರ ಸಮೀಪ ನಡು ಹರಯದ ವ್ಯಕ್ತಿಯೊಬ್ಬ ಚೂರಿಯನ್ನು ಹಿಡಿದುಕೊಂಡು ದಾಂಧಲೆ ನಡೆಸಿದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News