ಭಾರತದ ಅಥ್ಲೀಟ್‌ಗಳಿಗೆ5 ಚಿನ್ನದ ಪದಕ

Update: 2019-05-30 18:40 GMT

ಹೊಸದಿಲ್ಲಿ, ಮೇ 30: ಕಝಕ್‌ಸ್ತಾನದ ಅಲ್ಮೆಟಿಯಲ್ಲಿ ನಡೆದ 20 ವರ್ಷದೊಳಗಿನವರ ಯುರಾಸಿಯಾನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಥ್ಲೀಟ್‌ಗಳು ಐದು ಚಿನ್ನ ಹಾಗೂ ಮೂರು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.

ಗುರುವಾರ ಕೊನೆಗೊಂಡ ದ್ವಿದಿನ ಅಥ್ಲೀಟ್ ಕೂಟದಲ್ಲಿ ಕಝಕ್‌ಸ್ತಾನ, ಕಿರ್ಗಿಸ್ತಾನ, ಉಜ್ಬೇಕಿಸ್ತಾನ, ಇರಾನ್, ಭಾರತ ಹಾಗೂ ತಜಿಕಿಸ್ತಾನದ ಅಂಡರ್-20 ರಾಷ್ಟ್ರೀಯ ತಂಡಗಳು ಭಾಗವಹಿಸಿದ್ದವು. ಮೊದಲ ದಿನವಾದ ಬುಧವಾರ ಗುರ್ವಿಂದರ್ ಸಿಂಗ್ ಬಾಲಕರ 100 ಮೀ. ಓಟದಲ್ಲಿ 10.42 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಜಯಿಸಿದ್ದರು. 400 ಮೀ. ಓಟದಲ್ಲಿ 47.90 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ವಿಕ್ರಾಂತ್ ಪಾಂಚಾಲ್ ಮೊದಲ ಸ್ಥಾನ ಪಡೆದಿದ್ದರು. ಬಾಲಕಿಯರ 400 ಮೀ. ಫೈನಲ್‌ನಲ್ಲಿ ಫ್ಲೊರೆನ್ಸ್ ಬಾರ್ಲಾ 54.73 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ಗುರುವಾರ ಶ್ರೀಕಿರಣ್ ಬಾಲಕರ 800 ಮೀ. ಓಟದಲ್ಲಿ 1:54.62 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ರೋಹಿತ್ ಯಾದವ್ ಬಾಲಕರ ಜಾವೆಲಿನ್ ಎಸೆತದಲ್ಲಿ 74.55ಮೀ. ದೂರಕ್ಕೆ ಜಾವೆಲಿನ್ ಎಸೆದು ಭಾರತಕ್ಕೆ 5ನೇ ಸ್ವರ್ಣ ಗೆದ್ದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News