×
Ad

ಹಾವ್ಕ್ ಜೆಟ್ ಹಾರಿಸಿದ ಮೊದಲ ಮಹಿಳಾ ಪೈಲಟ್ ಮೋಹನಾ ಸಿಂಗ್

Update: 2019-05-31 21:26 IST
ಫೋಟೊ ಕೃಪೆ: ANI

ಹೊಸದಿಲ್ಲಿ, ಮೇ 31: ಸುಧಾರಿತ ಜೆಟ್ ವಿಮಾನ ಹಾವ್ಕ್ ಅನ್ನು ಹಾರಿಸುವ ಮೂಲಕ ಫ್ಲೈಟ್ ಲೆಫ್ಟಿನೆಂಟ್ ಮೋಹನಾ ಸಿಂಗ್ ಈ ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳಾ ಪೈಲೆಟ್ ಆಗಿ ಹೊರ ಹೊಮ್ಮಿದ್ದಾರೆ.

ಅವರೊಂದಿಗೆ ಇಬ್ಬರು ಮಹಿಳೆಯರಾದ ಭಾವನಾ ಕಾಂತ್ ಹಾಗೂ ಅವನಿ ಚತುರ್ವೇದಿ 2016 ಜೂನ್‌ನಲ್ಲಿ ಯುದ್ಧ ವಿಮಾನ ತರಬೇತಿಗೆ ಸೇರಿದ್ದರು. ಕಳೆದ ವಾರ ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಮಿಗ್-21ನ್ನು ಹಗಲಿನ ಸಮಯದಲ್ಲಿ ಹಾರಿಸಿದ ಮೊದಲ ಮಹಿಳಾ ಪೈಲೆಟ್ ಎಂಬ ಕೀರ್ತಿಗೆ ಬಾಜನರಾಗಿದ್ದರು.

ಲೆಫ್ಟಿನೆಂಟ್ ಮೋಹನಾ ಸಿಂಗ್ ಅವರ ತರಬೇತಿ ಗಗನದಿಂದ ಗಗನಕ್ಕೆ ಹಾಗೂ ಗಗನದಿಂದ ನೆಲಕ್ಕೆ ವಿಮಾನ ಹಾರಾಟ ನಡೆಸುವುದು ಕೂಡ ಒಳಗೊಂಡಿದೆ. ರಾಕೆಟ್, ಗನ್ ಉಡಾವಣೆ, ಅತ್ಯಧಿಕ ಸಾಮರ್ಥ್ಯದ ಬಾಂಬ್ ಹಾಕುವುದು ಒಳಗೊಂಡ ಹಲವು ಅಭ್ಯಾಸ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಅಲ್ಲದೆ, ವಾಯು ಪಡೆಯ ಮಟ್ಟದ ಹಾರಾಟ ಅಭ್ಯಾಸದಲ್ಲಿ ಕೂಡ ಅವರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News