×
Ad

ದಿಲ್ಲಿಯಲ್ಲಿ ಕಳೆದ ಐದು ವರ್ಷಗಳಲ್ಲೇ ಅತ್ಯಧಿಕ ಉಷ್ಣಾಂಶ ದಾಖಲು

Update: 2019-05-31 21:27 IST

ಹೊಸದಿಲ್ಲಿ, ಮೇ 31: ಹೊಸದಿಲ್ಲಿಯಲ್ಲಿ ಉಷ್ಣ ಮಾರುತದ ಬೀಸುವಿಕೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಶುಕ್ರವಾರ ‘ರೆಡ್ ಕಲರ್’ ಮುನ್ನೆಚ್ಚರಿಕೆ ಹೊರಡಿಸಿದೆ.

ಉಷ್ಣ ಮಾರುತ ಬೀಸುವ ಸಂದರ್ಭ ಹವಾಮಾನ ಇಲಾಖೆ ನಾಲ್ಕು ಬಣ್ಣದ ಸಂದೇಶವನ್ನು ನೀಡುತ್ತದೆ. ಹಸಿರು, ಹಳದಿ, ಆ್ಯಂಬರ್ ಹಾಗೂ ಕೆಂಪು. ಹಸಿರು ಸಹಜ ಸ್ಥಿತಿಯನ್ನು ಹಾಗೂ ಕೆಂಪು ತೀವ್ರತರವಾದ ಹವಾಮಾನ ಪರಿಸ್ಥಿತಿಯನ್ನು ಸೂಚಿಸುತ್ತದೆ. ಹೊಸದಿಲ್ಲಿಯಲ್ಲಿ ‘ರೆಡ್ ಕಲರ್’ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆಯ ವೆಬ್‌ಸೈಟ್ ಹೇಳಿದೆ. ಹೊಸದಿಲ್ಲಿಯಲ್ಲಿ ಗುರುವಾರ 46.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 5 ವರ್ಷಗಳಲ್ಲೇ ಅತ್ಯಧಿಕ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News