×
Ad

ಬೇಹುಗಾರಿಕೆಗಾಗಿ ಪಾಕ್ ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆ: ಇಬ್ಬರಿಗೆ ಮರಣ ದಂಡನೆ

Update: 2019-05-31 23:00 IST

ಇಸ್ಲಾಮಾಬಾದ್, ಮೇ 31: ಪಾಕಿಸ್ತಾನಿ ಸೇನೆಯು ಬೇಹುಗಾರಿಕೆ ನಡೆಸಿರುವುದಕ್ಕಾಗಿ ಓರ್ವ ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಹಾಗೂ ಇದೇ ಅಪರಾಧಕ್ಕಾಗಿ ಓರ್ವ ಬ್ರಿಗೇಡಿಯರ್ ಮತ್ತು ಓರ್ವ ನಾಗರಿಕ ಅಧಿಕಾರಿಗೆ ಮರಣ ದಂಡನೆ ವಿಧಿಸಿದೆ.

‘‘ಬೇಹುಗಾರಿಕೆ ಹಾಗೂ ದೇಶದ ಹಿತಾಸಕ್ತಿಯನ್ನು ಕಡೆಗಣಿಸಿ ಸೂಕ್ಷ್ಮ ಮಾಹಿತಿಯನ್ನು ವಿದೇಶಿ ಸಂಸ್ಥೆಗಳಿಗೆ ಸೋರಿಕೆ ಮಾಡಿರುವುದಕ್ಕಾಗಿ’’ ಮೂವರಿಗೆ ನೀಡಲಾಗಿರುವ ಶಿಕ್ಷೆಯನ್ನು ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವ ಅನುಮೋದಿಸಿದ್ದಾರೆ ಎಂಬುದಾಗಿ ಸೇನೆಯು ಗುರುವಾರ ನೀಡಿದ ಹೇಳಿಕೆಯೊಂದು ತಿಳಿಸಿದೆ.

ಮುಚ್ಚಿದ ಬಾಗಿಲ ಕೋಣೆಯಲ್ಲಿ ಆರೋಪಿಗಳ ವಿಚಾರಣೆ ನಡೆದಿತ್ತು.

ನಿವೃತ್ತ ಲೆಫ್ಟಿನೆಂಟ್ ಜನರಲ್ ಜಾವೇದ್ ಇಕ್ಬಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಂದರೆ, ಪಾಕಿಸ್ತಾನದ ಕಾನೂನಿನ ಪ್ರಕಾರ ಅವರು 14 ವರ್ಷಗಳನ್ನು ಜೈಲಿನಲ್ಲಿ ಕಳೆಯಬೇಕಾಗಿದೆ.

ಅದೇ ವೇಳೆ, ನಿವೃತ್ತ ಬ್ರಿಗೇಡಿಯರ್ ರಝಾ ರಿಝ್ವಿನ್ ಮತ್ತು ಸೇನಾ ಸಂಸ್ಥೆಯೊಂದರಲ್ಲಿ ನಾಗರಿಕ ವೈದ್ಯರಾಗಿ ಕೆಲಸ ಮಾಡಿದ್ದ ವಸೀಮ್ ಅಕ್ರಮ್‌ಗೆ ಮರಣ ದಂಡನೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News