×
Ad

ಸ್ಫೋಟಕ ಸ್ಥಾವರದಲ್ಲಿ ಸ್ಫೋಟ; ಇಬ್ಬರು ನಾಪತ್ತೆ

Update: 2019-06-01 22:31 IST

ಮಾಸ್ಕೋ, ಜೂ. 1: ರಶ್ಯದ ಝೆರ್ಝಿನ್‌ಸ್ಕ್ ಪಟ್ಟಣದಲ್ಲಿರುವ ಕ್ರಿಸ್ಟಲ್ ಸ್ಫೋಟಕ ಸ್ಥಾವರದಲ್ಲಿ ಶನಿವಾರ ಸ್ಫೋಟವೊಂದು ಸಂಭವಿಸಿದ್ದು, ಕನಿಷ್ಠ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಇಂಟರ್‌ಫ್ಯಾಕ್ಸ್ ಮತ್ತು ಆರ್‌ಐಎ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

‘‘ನಮಗೆ ಗೊತ್ತಿರುವಂತೆ ಇಬ್ಬರು ನಾಪತ್ತೆಯಾಗಿದ್ದಾರೆ’’ ಎಂದು ಉಪ ಗವರ್ನರ್ ಡಿಮಿಟ್ರಿ ಕ್ರಸ್ನೊವ್ ಹೇಳಿರುವುದಾಗಿ ಆರ್‌ಐಎ ವರದಿ ಮಾಡಿದೆ.

ಸ್ಫೋಟದಲ್ಲಿ ಸುಮಾರು 22 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲವೊಂದನ್ನು ಉಲ್ಲೇಖಿಸಿ ಇಂಟರ್‌ಫ್ಯಾಕ್ಸ್ ತಿಳಿಸಿದೆ.

ಕ್ರಿಸ್ಟಲ್ ವಿಜ್ಞಾನ ಸಂಸ್ಥೆಯು ಸೇನಾ ಮತ್ತು ನಾಗರಿಕ ಬಳಕೆಗಾಗಿ ಸ್ಫೋಟಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ರಶ್ಯದ ಪ್ರಮುಖ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News