ಚಂದ್ರಯಾನಕ್ಕೆ ಪೂರಕ ಸಾಧನ ರವಾನೆಗೆ ಮೂರು ಸಂಸ್ಥೆಗಳ ನೇಮಕ: ನಾಸಾ

Update: 2019-06-01 18:08 GMT

ವಾಷಿಂಗ್ಟನ್ , ಜೂ.1: ಚಂದ್ರಯಾನಕ್ಕೆ ಪೂರಕವಾಗಿ 2020 ಮತ್ತು 2021ರಲ್ಲಿ ಚಂದ್ರನ ಮೇಲ್ಮೈಗೆ ಸಲಕರಣೆಗಳನ್ನು ರವಾನಿಸಲು ಮೂರು ಸಂಸ್ಥೆಗಳ ನೆರವು ಪಡೆಯಲಾಗುವುದು . ಈ ಸಲಕರಣೆಗಳನ್ನು ವೈಜ್ಞಾನಿಕ ಪರಿಶೋಧನೆ ಮತ್ತು ಆಧುನಿಕ ತಂತ್ರಜ್ಞಾನದ ಪ್ರದರ್ಶನ ನಡೆಸಲು ಬಳಸಲಾಗುವುದು . ಇದರಿಂದ 2024ರಲ್ಲಿ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯಲು ಸಹಾಯವಾಗುವುದು ಎಂದು ನಾಸಾ (ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ) ತಿಳಿಸಿದೆ.

ಆ್ಯಸ್ಟ್ರೋಬಾಟಿಕ್, ಇನ್‌ಟ್ಯೂಟಿವ್ ಮೆಷೀನ್ಸ್ ಮತ್ತು ಆರ್ಬಿಟ್ ಬಿಯಾಂಡ್ ಎಂಬ ಅಮೆರಿಕದ ಮೂರು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ . ನಾಸಾದ ಚಂದ್ರಯಾನ ಕಾರ್ಯಕ್ರಮದಲ್ಲಿ ಇದು ಒಂದು ಬೃಹತ್ ಮುನ್ನಡೆಯಾಗಿದೆ . ಮುಂದಿನ ವರ್ಷ ಚಂದ್ರನ ಮೇಲ್ಮೈಯಲ್ಲಿ ನಮ್ಮ ಪ್ರಾರಂಭಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ ಕಾರ್ಯ ನಡೆಯಲಿದ್ದು ಇದು ಮುಂದಿನ ಐದು ವರ್ಷದಲ್ಲಿ ಚಂದ್ರನೆಡೆಗೆ ಪ್ರಥಮ ಮಹಿಳೆ ಮತ್ತು ಬಳಿಕ ಪುರುಷನನ್ನು ಕಳಿಸುವ ಯೋಜನೆಗೆ ಪೂರಕವಾಗಲಿದೆ ಎಂದು ನಾಸಾದ ಆಡಳಿತಾಧಿಕಾರಿ ಜಿಮ್ ಬ್ರಿಡೆನ್‌ಸ್ಟೈನ್ ಹೇಳಿದ್ದಾರೆ.

ಇವುಗಳಲ್ಲಿ ಪ್ರತಿಯೊಂದು ಇಳಿದಾಣ ಸೇವೆ (ಲ್ಯಾಂಡಿಂಗ್ ಸರ್ವಿಸ್) ಒದಗಿಸುವವರೂ ಚಂದ್ರನೆಡೆಗೆ ನಿರ್ಧಿಷ್ಟ ಸಾಧನವನ್ನು ಒಯ್ಯುತ್ತವೆ. ಚಂದ್ರನಿಗೆ ಸಂಬಂಧಿಸಿದ ವೈಜ್ಞಾನಿಕ ಅನ್ವೇಷಣೆ ಕೈಗೊಳ್ಳಲು, ಚಂದ್ರನ ಮೇಲ್ಮೈಯಲ್ಲಿ ನಡೆಸುವ ಗಗನಯಾತ್ರಿ ಚಟುವಟಿಕೆಗಳಿಂದ ಆಗುವ ಚಂದ್ರನ ಮೇಲೆ ಪರಿಣಾಮದ ಪರಿಶೀಲನೆ, ಸಂಚಾರ ನಿಖರತೆಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News