ಇವಿಎಂ ವಿವಾದ: ಕ್ಷೇತ್ರವಾರು ಮತದಾನದ ವ್ಯತ್ಯಾಸಗಳ ವಿವರ ನೀಡುವ ಮ್ಯಾಪ್

Update: 2019-06-03 07:48 GMT

ಲೋಕಸಭಾ ಚುನಾವಣೆಯ ಸಂದರ್ಭ ಚಲಾವಣೆಯಾದ ಮತಗಳು ಮತ್ತು ಇವಿಎಂನಲ್ಲಿ ಎಣಿಕೆಗೆ ಸಿಕ್ಕ ಮತಗಳಲ್ಲಿನ ಭಾರೀ ವ್ಯತ್ಯಾಸಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಈ ನಡುವೆ aamjanata.com ಈ ವ್ಯತ್ಯಾಸಗಳನ್ನು ತೋರಿಸುವ ಮ್ಯಾಪ್ ಅನ್ನು ಪ್ರಕಟಿಸಿದೆ. ಫಲಿತಾಂಶಗಳ ಅಂಕಿ ಅಂಶಗಳನ್ನು ಭಾರತೀಯ ಚುನಾವಣಾ ಆಯೋಗದ ವೆಬ್ ಸೈಟ್ ನಿಂದ ಪಡೆಯಲಾಗಿದೆ.

1ರಿಂದ 4ನೆ ಹಂತದ ಚುನಾವಣೆಯಲ್ಲಿ ಕ್ಷೇತ್ರವಾರು ಮತದಾನದ ವಿವರಗಳನ್ನು ಚುನಾವಣಾ ಆಯೋಗವು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿತ್ತು. ನಂತರ ಚಲಾವಣೆಯಾದ ಮತಗಳು ಮತ್ತು ಎಣಿಕೆಗೆ ಸಿಕ್ಕ ಮತಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿದಾಗ ಈ ಅಂಕಿಅಂಶಗಳನ್ನು ತೆಗೆದುಹಾಕಿತ್ತು. ಆದರೆ ಈ ಫೈಲ್ ಗಳನ್ನು ಆರ್ಕೈವ್ ಮಾಡುವ ಮೂಲಕ ಪಡೆಯಲಾಗಿದೆ ಎಂದು aamjanata.com ವರದಿ ಮಾಡಿದೆ.

ಕ್ಷೇತ್ರವಾರು ಮತದಾನವನ್ನು ಈ ಮ್ಯಾಪ್ ಸಹಾಯದಿಂದ ನೀವು ಕೂಡ ಪರಿಶೀಲಿಸಬಹುದು. ಮ್ಯಾಪ್ ಅನ್ನು ಝೂಮ್ ಮಾಡಿ ಆಯಾ ಕ್ಷೇತ್ರಗಳ ಮೇಲೆ ಇರುವ ನೀಲಿ ಗುರುತನ್ನು ( ಮಾರ್ಕ್) ಕ್ಲಿಕ್ ಮಾಡುವ ಮೂಲಕ ನೀವು ಮತದಾನದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.

ಕೃಪೆ: aamjanata.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News