ಮೊದಲು ನೀವು ಸಾಮಾನ್ಯ ಸ್ಥಿತಿಗೆ ಬನ್ನಿ: ಅಮೆರಿಕಕ್ಕೆ ಇರಾನ್ ಅಧ್ಯಕ್ಷ ತಿರುಗೇಟು

Update: 2019-06-03 18:22 GMT

ಲಂಡನ್, ಜೂ. 3: ಯಾವುದೇ ಪೂರ್ವ ಶರತ್ತುಗಳಿಲ್ಲದೆ ಇರಾನ್ ಜೊತೆ ಮಾತುಕತೆ ನಡೆಸುವ ಅಮೆರಿಕದ ಪ್ರಸ್ತಾವಕ್ಕೆ ರವಿವಾರ ಪ್ರತಿಕ್ರಿಯಿಸಿರುವ ಇರಾನ್ ಅಧ್ಯಕ್ಷ ಹಸನ್ ರೂಹಾನಿ, ಮಾತುಕತೆಯ ಮೇಜಿನಿಂದ ಹೊರನಡೆದಿದ್ದು ಅಮೆರಿಕ, ಹಾಗಾಗಿ, ಅಮೆರಿಕವು ಸಾಮಾನ್ಯ ಸ್ಥಿತಿಗೆ ಮರಳಬೇಕು ಎಂದು ಹೇಳಿದ್ದಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮಗಳ ಬಗ್ಗೆ ಯಾವುದೇ ಪೂರ್ವ ಶರತ್ತುಗಳಿಲ್ಲದೆ ಆ ದೇಶದೊಂದಿಗೆ ಮಾತುಕತೆ ನಡೆಸಲು ಅಮೆರಿಕ ಸಿದ್ಧವಾಗಿದೆ, ಆದರೆ ಅದು ‘ಸಾಮಾನ್ಯ ದೇಶ’ದಂತೆ ವರ್ತಿಸಬೇಕಾದ ಅಗತ್ಯವಿದೆ ಎಂಬುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ರವಿವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

‘‘ಮಾತುಕತೆಯ ಮೇಜನ್ನು ತೊರೆದು ಒಪ್ಪಂದವನ್ನು ಮುರಿದ ದೇಶವು ಮೊದಲು ಸಾಮಾನ್ಯ ಸ್ಥಿತಿಗೆ ಬರಬೇಕು. ಅಲ್ಲಿಯವರೆಗೆ, ಪ್ರತಿರೋಧ ತೋರುವುದಲ್ಲದೆ ನಮಗೆ ಬೇರೆ ಯಾವುದೇ ಆಯ್ಕೆಯಿಲ್ಲ’’ ಎಂದು ರೂಹಾನಿ ಹೇಳಿರುವುದಾಗಿ ಇರಾನ್ ಸರಕಾರದ ಅಧಿಕೃತ ವೆಬ್‌ಸೈಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News