ವಿಶ್ವಕಪ್‌ನಲ್ಲಿ ಈವರೆಗೆ ಟಾಸ್ ಗೆಲ್ಲುವುದೇ ನಿರ್ಣಾಯಕ ..!

Update: 2019-06-04 03:43 GMT

ಲಂಡನ್, ಜೂ.3: ಹನ್ನೆರಡನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಯಾವುದೇ ತಂಡಕ್ಕೂ ಟಾಸ್ ಗೆಲ್ಲುವುದು ನಿರ್ಣಾಯಕವಾಗಿದೆ. ಈ ವರೆಗೆ ನಡೆದ ಎಲ್ಲ ಪಂದ್ಯಗಳಲ್ಲೂ ಈ ಅಂಶ ಸಾಬೀತಾಗಿದೆ. ಪಾಕಿಸ್ತಾನ ಸರ್ಫರಾಝ್ ಅಹ್ಮದ್ ಮತ್ತು ಶ್ರೀಲಂಕಾದ ನಾಯಕ ದಿಮುತ್ ಕರುಣರತ್ನೆ ತಮ್ಮ ತಂಡದ ಹೀನಾಯ ಸೋಲಿಗೆ ಟಾಸ್ ಸೋತದ್ದು ಕಾರಣವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಶುಕ್ರವಾರ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧ ಪಂದ್ಯದಲ್ಲಿ ಪಾಕಿಸ್ತಾನ 105 ರನ್‌ಗಳಿಗೆ ಆಲೌಟಾಗಿತ್ತು. ನ್ಯೂಝಿಲಂಡ್ ವಿರುದ್ಧ ಶ್ರೀಲಂಕಾ ತಂಡ 136 ರನ್‌ಗಳಿಗೆ ಆಲೌಟಾಗಿತ್ತು.10 ವಿಕೆಟ್‌ಗಳ ಸೋಲು ಅನುಭವಿಸಿತ್ತು. ಉಪಖಂಡದ ತಂಡಗಳು ಇಂಗ್ಲೆಂಡ್‌ನಲ್ಲಿ ವೇಗ ಮತ್ತು ಸ್ಪಿನ್ ದಾಳಿಗೆ ತತ್ತರಿಸಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಆತಿಥೇಯ ಇಂಗ್ಲೆಂಡ್ 104 ರನ್‌ಗಳ ಜಯ ಗಳಿಸಿತು.

  ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಜಯಿಸಿ ಬೌಲಿಂಗ್ ಆಯ್ದುಕೊಂಡಿತ್ತು. ಪಾಕಿಸ್ತಾನವನ್ನು 105 ರನ್‌ಗಳಿಗೆ ನಿಯಂತ್ರಿಸಿದ ವೆಸ್ಟ್ ಇಂಡೀಸ್ 7 ವಿಕೆಟ್‌ಗಳ ಜಯ ದಾಖಲಿಸಿತು.

 ಮೂರನೇ ಪಂದ್ಯದಲ್ಲಿ ಟಾಸ್ ಜಯಿಸಿ ನ್ಯೂಝಿಲೆಂಡ್ ಬೌಲಿಂಗ್ ಆಯ್ದುಕೊಂಡಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾವನ್ನು 136 ರನ್‌ಗಳಿಗೆ ನಿಯಂತ್ರಿಸಿದ ನ್ಯೂಝಿಲೆಂಡ್ 10 ವಿಕೆಟ್‌ಗಳ ಜಯ ಗಳಿಸಿತು.

4ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಅದು 207 ರನ್ ಗಳಿಸಿತು. ಆಸ್ಟ್ರೇಲಿಯ ಗೆಲುವಿಗೆ 208 ರನ್‌ಗಳ ಸವಾಲನ್ನು ಪಡೆದು 3 ವಿಕೆಟ್ ನಷ್ಟದಲ್ಲಿ 209 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಜಯ ಗಳಿಸಿತ್ತು.

5ನೇ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ತಂಡ ಬೌಲಿಂಗ್ ಆಯ್ದುಕೊಂಡಿತು. ಆದರೆ ಭರ್ಜರಿ ಬ್ಯಾಟಿಂಗ್ ನಡೆಸಿದ ಎದುರಾಳಿ ತಂಡ 6 ವಿಕೆಟ್ ನಷ್ಟದಲ್ಲಿ 330 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕ 8 ವಿಕೆಟ್ ನಷ್ಟದಲ್ಲಿ 309 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ 21 ರನ್‌ಗಳ ಜಯ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News