9 ವರ್ಷದ ಮಲಮಗಳ ಕತ್ತು ಹಿಸುಕಿ ಕೊಂದ ಮಹಿಳೆಗೆ 22 ವರ್ಷ ಜೈಲು

Update: 2019-06-04 16:57 GMT

ನ್ಯೂಯಾರ್ಕ್, ಜೂ. 4: ತನ್ನ 9 ವರ್ಷದ ಮಲಮಗಳನ್ನು ಕತ್ತು ಹಿಸುಕಿ ಕೊಂದ ಅಮೆರಿಕದಲ್ಲಿರುವ ಭಾರತ ಮೂಲದ ಮಹಿಳೆಯೊಬ್ಬಳಿಗೆ ನ್ಯಾಯಾಲಯವೊಂದು 22 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನ್ಯೂಯಾರ್ಕ್ ರಾಜ್ಯದ ಕ್ವೀನ್ಸ್ ನಗರದ 55 ವರ್ಷದ ಶಮ್‌ದಾಯಿ ಅರ್ಜುನ್ ಎಂಬ ಮಹಿಳೆಗೆ ಈ ಶಿಕ್ಷೆ ನೀಡಲಾಗಿದೆ. ಕಳೆದ ತಿಂಗಳು ಕ್ವೀನ್ಸ್ ಸುಪ್ರೀಮ್ ಕೋರ್ಟ್ ನ್ಯಾಯಾಧೀಶ ಕೆನೆತ್ ಹೋಲ್ಡರ್ ಸಮ್ಮುಖದಲ್ಲಿ ನ್ಯಾಯಮಂಡಳಿಯೊಂದು ಈ ಮಹಿಳೆಯನ್ನು ದೋಷಿ ಎಂಬುದಾಗಿ ತೀರ್ಮಾನಿಸಿತ್ತು. ಸೋಮವಾರ ಅದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿತು.

 ‘‘ಕೆಟ್ಟ ಮಲತಾಯಂದಿರ ಕತೆಗಳನ್ನು ನಾವು ಕೇಳಿದ್ದೇವೆ. ಈ ಪ್ರಕರಣದ ಆರೋಪಿಯು ಅವರೆಲ್ಲರನ್ನೂ ಮೀರಿಸಿದ್ದಾರೆ. ಊಹೆಗೂ ನಿಲುಕದ ಕೃತ್ಯವನ್ನು ಆರೋಪಿ ಮಾಡಿದ್ದಾಳೆ. ಅವಳು ತನ್ನ ಮಲಮಗಳ ಪುಟ್ಟ ಕುತ್ತಿಗೆಯ ಸುತ್ತ ಕೈಹಾಕಿ ಪ್ರಾಣ ತೆಗೆದಿದ್ದಾಳೆ’’ ಎಂದು ನ್ಯಾಯಾಲಯದ ತೀರ್ಪಿನ ಬಳಿಕ ಹೇಳಿಕೆಯೊಂದನ್ನು ನೀಡಿದ ಉಸ್ತುವಾರಿ ಕ್ವೀನ್ಸ್ ಜಿಲ್ಲಾ ಅಟಾರ್ನಿ ಜಾನ್ ರಯಾನ್ ಹೇಳಿದರು.

2016 ಆಗಸ್ಟ್ 19ರ ಸಂಜೆ ತನ್ನ ಮನೆಯ ಸ್ನಾನದ ಕೋಣೆಯಲ್ಲಿ ಬಾಲಕಿಯನ್ನು ಈ ಮಹಿಳೆ ಕತ್ತು ಹಿಸುಕಿ ಕೊಲೆಗೈದಳೆಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News