×
Ad

52 ದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್ ಸೋದರಿ

Update: 2019-06-04 22:41 IST

ಪ್ಯಾಂಗ್‌ಯಾಂಗ್ (ಉತ್ತರ ಕೊರಿಯ), ಜೂ. 4: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್‌ರ ಸಹೋದರಿ ಕಿಮ್ ಯೊ ಜೊಂಗ್ 52 ದಿನಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

 ಫೆಬ್ರವರಿ ಕೊನೆಯಲ್ಲಿ ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ನಡುವಣ ಎರಡನೇ ಶೃಂಗ ಸಮ್ಮೇಳನವು ವಿಫಲಗೊಂಡಂದಿನಿಂದ ಕಿಮ್ ಯೊ ಜೊಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ವಿಫಲ ಶೃಂಗ ಸಮ್ಮೇಳನದ ಹಿನ್ನೆಲೆಯಲ್ಲಿ ಅವರಿಗೆ ತಾತ್ಕಾಲಿಕ ಹಿಂಭಡ್ತಿ ನೀಡಲಾಗಿದೆ ಎಂಬುದಾಗಿ ದಕ್ಷಿಣ ಕೊರಿಯದ ಪತ್ರಿಕೆಯೊಂದು ವರದಿ ಮಾಡಿದ ಸ್ವಲ್ಪವೇ ಹೊತ್ತಿನ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

 ಪ್ಯಾಂಗ್‌ ಯಾಂಗ್‌ ನಲ್ಲಿ ಸೋಮವಾರ ನಡೆದ ಸಾಮೂಹಿಕ ಜಿಮ್ನಾಸ್ಟಿಕ್ ಪ್ರದರ್ಶನವೊಂದನ್ನು ವೀಕ್ಷಿಸಲು ಕಿಮ್ ಜಾಂಗ್ ಉನ್ ಮತ್ತು ಅವರ ಸಹೋದರಿ ಕಿಮ್ ಯೊ ಜೊಂಗ್ ಸರಕಾರದ ಹಲವು ಗಣ್ಯರೊಡನೆ ಆಗಮಿಸಿದರು ಎಂಬುದಾಗಿ ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ ಎಂದು ‘ಎಫೆ ನ್ಯೂಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News