ನೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣ: ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ

Update: 2019-06-06 13:50 GMT

ಚೆನ್ನೈ, ಜೂ.6: ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ)ನಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ತಮಿಳುನಾಡಿನ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ತಿರುಪುರ ಜಿಲ್ಲೆಯ ವಿಲಿಂಕಾಡು ಗ್ರಾಮದ ರಿತುಶ್ರೀ ಹಾಗೂ ಪಟ್ಟುಕೊಟ್ಟಾಯ್ ಜಿಲ್ಲೆಯ ವೈಶ್ಯ ಆತ್ಮಹತ್ಯೆ ಮಾಡಿಕೊಂಡವರು. ರೀತುಶ್ರೀ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಬೇಸರದಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಎಸ್ಸೆಸ್ಸೆಲ್ಸಿಯಲ್ಲಿ 500ರಲ್ಲಿ 461 ಅಂಕ, ಪಿಯುಸಿಯಲ್ಲಿ 500ರಲ್ಲಿ 490 ಅಂಕ ಗಳಿಸಿದ್ದಳು ಎಂದು ವಿದ್ಯಾರ್ಥಿನಿಯ ಹೆತ್ತವರು ತಿಳಿಸಿದ್ದಾರೆ. ವೈಶ್ಯ ಕೂಡಾ ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಗಳಿಸಿದ್ದರೂ ನೀಟ್‌ನಲ್ಲಿ ಅನುತ್ತೀರ್ಣಳಾಗಿದ್ದಳು ಎಂದು ಅವಳ ಪೋಷಕರು ತಿಳಿಸಿದ್ದಾರೆ.

 ಈ ವರ್ಷ ತಮಿಳುನಾಡಿನಿಂದ ನೀಟ್ ಪರೀಕ್ಷೆಗೆ ಹಾಜರಾದ 1,23,078 ವಿದ್ಯಾರ್ಥಿಗಳಲ್ಲಿ 59,785 ವಿದ್ಯಾರ್ಥಿಗಳು ನೀಟ್ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ತಮಿಳುನಾಡಿನಲ್ಲಿ ಶೇ.39.56 ವಿದ್ಯಾರ್ಥಿಗಳು ನೀಟ್ ತೇರ್ಗಡೆಯಾಗಿದ್ದರೆ ಈ ವರ್ಷ ಫಲಿತಾಂಶದಲ್ಲಿ ಹೆಚ್ಚಳವಾಗಿದ್ದು ಶೇ.48.57ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News