ಸ್ವಚ್ಛ ಭಾರತ್ ಶೌಚಾಲಯಗಳಲ್ಲಿ ಗಾಂಧೀಜಿ, ಅಶೋಕ ಚಕ್ರದ ಚಿತ್ರವುಳ್ಳ ಟೈಲ್ಸ್ ಅಳವಡಿಕೆ: ವ್ಯಾಪಕ ಆಕ್ರೋಶ

Update: 2019-06-06 14:46 GMT

ಬುಲಂದ್‌ಶಹರ್, ಜೂ. 6: ಬುಲಂದ್‌ಶಹರ್‌ನ ಇಚ್ಛಾವಾರಿ ಗ್ರಾಮದಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಶೌಚಾಲಯದ ಒಳಗಡೆ ಮಹಾತ್ಮಾ ಗಾಂಧಿ ಹಾಗೂ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಚಕ್ರದ ಚಿತ್ರ ಒಳಗೊಂಡ ಟೈಲ್ಸ್‌ಗಳನ್ನು ಬಳಸಲಾಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಶೌಚಾಲಯದ ದೃಶ್ಯಾವಳಿ ವಿವಿಧ ಸಾಮಾಜಿಕ ಜಾಲ ತಾಣದಲ್ಲಿ ಸೋರಿಕೆಯಾದ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.

 ಗ್ರಾಮ ಮುಖ್ಯಸ್ಥನ ಆದೇಶದಂತೆ ಶೌಚಾಲಯದ ಒಳಗಡೆ ಈ ಟೈಲ್ಸ್ ಅಳವಡಿಸಲಾಗಿದೆ. ನಾವು ಈ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಿದೆವು. ಇದು ಉನ್ನತ ಅಧಿಕಾರಿಗಳ ನಿರ್ಧಾರವಾದುದರಿಂದ ಮಧ್ಯಪ್ರವೇಶಿಸದಂತೆ ಅವರು ನಮಗೆ ತಿಳಿಸಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ, ಅಧಿಕಾರಿಗಳು ಪ್ರಕರಣದ ಪರಿಶೀಲನೆ ನಡೆಸಿದ್ದಾರೆ ಹಾಗೂ ರಾಷ್ಟ್ರೀಯ ಚಿಹ್ನೆ ಹಾಗೂ ಮಹಾತ್ಮ ಗಾಂಧಿ ಚಿತ್ರವಿರುವ ಟೈಲ್ಸ್‌ಗಳನ್ನು ಅಳವಡಿಸಿರುವುದನ್ನು ಪತ್ತೆ ಮಾಡಿದ್ದಾರೆ.

ಈ ತನಿಖೆ ಬಳಿಕ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಹಾಗೂ ಗ್ರಾಮ ಪ್ರಧಾನ್ ಸಾವಿತ್ರಿ ದೇವಿ ಅವರಿಗೆ ನೋಟಿಸು ಜಾರಿ ಮಾಡಲಾಗಿದೆ. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿಯೋಜಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸುಮಾರು 508 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 13 ಶೌಚಾಲಯಗಳಲ್ಲಿ ಮಹಾತ್ಮಾ ಗಾಂಧಿ ಹಾಗೂ ಅಶೋಕ ಚಕ್ರದ ಚಿತ್ರ ಇರುವ ಟೈಲ್ಸ್‌ಗಳನ್ನು ಅಳವಡಿಸಲಾಗಿದೆ. ನಾವು ತಂಡ ರೂಪಿಸಿದ್ದೇವೆ ಹಾಗೂ ಎಲ್ಲ ಶೌಚಾಲಯಗಳ ಪರಿಶೀಲನೆ ನಡೆಸುತ್ತಿದ್ದೇವೆ. ಮಹಾತ್ಮಾ ಗಾಂಧಿ ಹಾಗೂ ಅಶೋಕ ಚಕ್ರದ ಚಿತ್ರ ಒಳಗೊಂಡ ಟೈಲ್ಸ್‌ಗಳನ್ನು ನಾವು ತೆಗೆದಿದ್ದೇವೆ.

ಅಮರ್‌ಜೀತ್ ಸಿಂಗ್, ಬುಲಂದ್‌ಶಹರ್‌ನ ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News